ಉಪಾಹಾರ ವ್ಯವಸ್ಥೆ

0
410

ಮೈಸೂರು ಪ್ರತಿನಿಧಿ ವರದಿ
ಪೊಲೀಸ್ ಇಲಾಖೆಯಿಂದ ಮಾವುತರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಗಜಪಡೆಯ ಮಾವುತರಿಗೆ, ಕಾವಾಡಿಗಳಿಗೆ ಮೈಸೂರು ಅರಮನೆ ಅವರಣದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
 
 
 
ಮಾವುತರು ಮತ್ತು ಕಾವಾಡಿಗಳ ಜತೆ ಪೊಲೀಸರು ಉಪಾಹಾರ ಮಾಡಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಮೈಸೂರು ನಗರ ಡಿಸಿಪಿ ಡಾ.ಹೆಚ್.ಟಿ.ಶೇಖರ್ ರುದ್ರಮುನಿ, ಎಎಸ್ ಪಿ ಶೈಲೇಂದ್ರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಮಾವುತರಿಗೆ, ಕಾವಾಡಿಗರಿಗೆ ಟೀ-ಶರ್ಟ್, ಟೋಪಿ ವಿತರಣೆ ಮಾಡಲಾಗಿದೆ.
 
 
ಜನಮನ ಸೊರೆಗೊಂಡ ಮಕ್ಕಳ ದಸರಾ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016 ಹಿನ್ನೆಲೆಯಲ್ಲಿ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮಕ್ಕಳ ದಸರಾ ನಡೆಯುತ್ತಿದೆ. ವಿವಿಧ ಜಿಲ್ಲೆಗಳ ಮಕ್ಕಳು ವೈವಿಧ್ಯಮಯ ಕಾರ್ಯಕ್ರಮ ನೀಡಿದ್ದಾರೆ. ಮಕ್ಕಳ ವಿವಿಧ ಕಾರ್ಯಕ್ರಮಗಳು ಜನಮನ ಸೊರೆಗೊಂಡಿದೆ. ಗಜಪಡೆ ಮಾವುತರು, ಕಾವಾಡಿಗಳ ಮಕ್ಕಳಿಂದಲೂ ನೃತ್ಯ ಕಾರ್ಯಕ್ರಮ ನಡೆದಿದೆ. ಇದೇ ಮೊದಲ ಬಾರಿಗೆ ದಸರಾಗೆ ಕಾಡಿನ ಮಕ್ಕಳ ನೃತ್ಯ ಕಾರ್ಯಕ್ರಮ ನಡೆದಿದೆ. ರಾಜ್ಯದ ವಿವಿಧ ಕಡೆಗಳಿಂದ ನೂರಾರು ಮಕ್ಕಳು ದಸರಾಕ್ಕೆ ಆಗಮಿಸಿದ್ದರು.

LEAVE A REPLY

Please enter your comment!
Please enter your name here