ಉಪನ್ಯಾಸಕರೊಂದಿಗೆ ಸಿಎಂ ಸಭೆ

0
176

ಬೆಂಗಳೂರು ಪ್ರತಿನಿಧಿ ವರದಿ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಿಯುಸಿ ಉಪನ್ಯಾಸಕರ ಜತೆ ಸಭೆ ನಡೆಸಲಿದ್ದಾರೆ. ದ್ವಿತೀಯ ಪಿಯುಸಿ ಉಪನ್ಯಾಸಕರ ಬೇಡಿಕೆ ಹಿನ್ನೆಲೆಯಲ್ಲಿ ಸಿಎಂ ಉಪನ್ಯಾಸಕರ ಸಭೆ ಕರೆದಿದ್ದಾರೆ.
 
 
 
ಇಂದು ಬೆಳಗ್ಗೆ 10 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಎರಡು ಪ್ರಮುಖ ಬೇಡಿಕೆಗಳು ಸಿಎಂ ಮುಂದೆ ಬರಲಿದೆ. ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಉಪನ್ಯಾಸಕರು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿಭಟನೆ ಮಾಡಿದ್ದಲ್ಲಿ ಜೈಲಿಗೆ ಹಾಕುವ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here