ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ

0
566

ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಬೋಧಕ ವೃಂದಕ್ಕಾಗಿ ‘ಪೆಡಗಾಗಿಕಲ್ ಸ್ಕಿಲ್ ಟ್ರೈನಿಂಗ್ ಪ್ರೋಗ್ರಾಂ’ (ವೈಜ್ಞಾನಿಕವಾಗಿ ಬೋಧನೆ ಮಾಡುವ ಕಲೆ) ಎಂಬ ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
 
 
ಚೆನ್ನೈನ ಎನ್ಐಟಿಟಿಟಿಆರ್ ನ ನಿವೃತ್ತ ನಿರ್ದೇಶಕರಾದ ಪ್ರೊ. ಬರ್ಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಬೋಧನಾ ಕಲೆಯ ಮುಂದಿರುವ ಸವಾಲುಗಳನ್ನು ಎದುರಿಸಿ, ಯಶಸ್ವಿ ಉಪನ್ಯಾಸಕರಾಗುವುದು ಹೇಗೆ, ಫಲಿತಾಂಶ ಆಧಾರಿತ ಸಿಕ್ಷಣ ಮತ್ತು ಬ್ಲೂಮ್ ಟೆಕ್ಸಾನಮಿಯನ್ನು (ಶಿಕ್ಷಣ ಕಲಿಕೆಯ ಮೂರು ಮಾದರಿಗಳು)ಅಳವಡಿಸಿಕೊಳ್ಳುವ ಕುರಿತು ಅವರು ಬೋಧಕ ವೃಂದಕ್ಕೆ ಮಾಹಿತಿ ನೀಡಿದರು.
 
 
 
ಯಶಸ್ವಿ ಉಪನ್ಯಾಸಕರಾಗಲು ವಿಷಯ ಜ್ಞಾನ, ವ್ಯಕ್ತಿತ್ವ ಮತ್ತು ಕಲಿಕೆಯಲ್ಲಿನ ಸ್ಪರ್ಧಾತ್ಮಕೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಮತ್ತು ಅವರ ಕುರಿತು ಇನ್ನಷ್ಟು ಗಮನ ನೀಡುವುದು ಅವಶ್ಯಕ ಎಂದವರು ಒತ್ತಿ ಹೇಳಿದರು.
ಗೀತಂ ನಿರ್ದೇಶಕರಾದ ಪ್ರೊ. ಕೆವಿಬಿ ರಾಜು, ಪ್ರೊ. ರಾಮ ಪ್ರಸಾದ್ ಮತ್ತು ಸಹಾಯಕ ಪ್ರಿನ್ಸಿಪಾಲ್ ಪ್ರೊ ಕ್ರಷ್ಣ ಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here