ಉದ್ಯಮಿ ಮೇಲೆ ಫೈರಿಂಗ್ ಯತ್ನ

0
263

ಬೆಂಗಳೂರು ಪ್ರತಿನಿಧಿ ವರದಿ
ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿಸಿದೆ. ಹೆಚ್ ಎಎಲ್ ಬಳಿಯ ಇಸ್ರೊ ಬ್ಯಾಕ್ ಗೇಟ್ ಬಳಿ ಘಟನೆ ಸಂಭವಿಸಿದೆ. ಉದ್ಯಮಿ ಕಾರ್ತಿಕ್ ರೆಡ್ಡಿ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ.
 
 
 
ಮಾರ್ಚ್ 4ರಂದು ರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಪರಿಚಿತರಿಂದ ಉದ್ಯಮಿಯ ಮೇಲೆ ದಾಳಿ ನಡೆದಿದೆ. ಶೂಟ್ ಮಾಡಲು ಮುಂದಾಗಿದ್ದ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿಗಳಾದ ಅಮೃತ್ ರೆಡ್ಡಿ, ನಿಶ್ವಿಂತ್ ರೆಡ್ಡಿ, ನಿಶ್ವಂತ್ ರೆಡ್ಡಿಯ ಗನ್ ಮ್ಯಾನ್ ಗುಂಡಿನ ದಾಳಿ ನಡೆಸಲು ಮುಂದಾಗಿದ್ದರು.
 
 
ಓರ್ವ ಆರೋಪಿ ನಿಶ್ವಂತ್ ರೆಡ್ಡಿಯ ಗನ್ ಮ್ಯಾನ್ ಉದ್ಯಮಿ ಕಾರ್ತಿಕ್ ರೆಡ್ಡಿ ತಲೆಗೆ ಗನ್ ಪಾಯಿಂಟ್ ಇಟ್ಟಿದ್ದ. ಈ ವೇಳೆ ಗನ್ ಮ್ಯಾನ್ ನನ್ನು ತಳ್ಳಿ ಉದ್ಯಮಿ ಕಾರ್ತಿಕ್ ರೆಡ್ಡಿ ಪಾರಾಗಿದ್ದರು. ಮೂವರು ಆರೋಪಿಗಳು ಉದ್ಯಮಿಗೆ ಪ್ರಾಣ ಬೆದರಿಕೆ ಹಾಕಿದ್ದರು. ಘಟನೆ ಬಳಿಕ ಉದ್ಯಮಿ ಕಾರ್ತಿಕ್ ರೆಡ್ಡಿ ಅವರು ಹೆಚ್ ಎಎಲ್ ಠಾಣೆಗೆ ದೂರು ನೀಡಿದ್ದರು.

LEAVE A REPLY

Please enter your comment!
Please enter your name here