ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿತಾ

0
394

ಸಿನಿ ಪ್ರತಿನಿಧಿ ವರದಿ
ದಕ್ಷಿಣ ಭಾರತದ ನಟಿ ನಿಖಿತಾ ತುಕ್ರಾಲ್ ಅವರು ಉದ್ಯಮಿ ಗಗನ್‍ದೀಪ್ ಸಿಂಗ್ ಮಾವೋ ಜೊತೆ ಸಪ್ತಪದಿ ತುಳಿದಿದ್ದಾರೆ.  ಮುಂಬೈನ ಖಾಸಗಿ ಹೊಟೇಲ್ ವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉತ್ತರ ಭಾರತೀಯ ಸಂಪ್ರದಾಯದಂತೆ ಇಬ್ಬರು ಸಪ್ತಪದಿ ತುಳಿದಿದ್ದಾರೆ.
 
 
 
ಎರಡು ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ತಾವು ಪ್ರೇಮಿಸಿದ ಪಂಜಾಬಿ ಹುಡುಗ ಗಗನ್ ದೀಪ್ ಸಿಂಗ್ ಮಾಗೋ ಅವರ ಕೈ ಹಿಡಿದಿದ್ದಾರೆ. ಕನ್ನಡ ಹಾಗು ತೆಲುಗು ಚಿತ್ರಗಳಲ್ಲಿ ತನ್ನ ಗ್ಲ್ಯಾಮರ್ ನಿಂದಲೇ ಬೋಲ್ಡ್ ಆಗಿದ್ದರು.
 
 
 
ಕಳೆದ ಡಿಸೆಂಬರ್ ನಲ್ಲಿ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ನಿಖಿತಾ ಅವರನ್ನು ನೋಡಿದ ಗಗನ್ ದೀಪ್ ಸಿಂಗ್ ಅವರು ಒಂದೇ ನೋಟಕ್ಕೆ ಮೆಚ್ಚಿಕೊಂಡಿದ್ದರು. ಆಮೇಲೆ ಮಾತುಕತೆ ಆಗಿ ಲವ್ ಆಗಿ ಇದೀಗ ಮದುವೆ ಕೂಡ ಮಾಡಿಕೊಂಡಿದ್ದಾರೆ. ಪಕ್ಕಾ ಪಂಜಾಬಿ ಶೈಲಿ ಅಂದರೆ ಉತ್ತರ ಭಾರತೀಯ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನೆರವೇರಿದೆ. ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
 
 
ಭಾನುವಾರ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಭಾರತದ ನಟ-ನಟಿಯರು, ಗಣ್ಯರು ಭಾಗವಹಿಸಿ ನವ ಜೋಡಿಯನ್ನು ಆಶೀರ್ವದಿಸಲಿದ್ದಾರೆ.

LEAVE A REPLY

Please enter your comment!
Please enter your name here