ಉದ್ಯಮಿಗಳಿಗೆ ಪಾಠ ಮಾಡಿದ ಮೋದಿ

0
283

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಂಚ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಅಮೆರಿಕಾ ತಲುಪಿದ್ದಾರೆ. ಮೂರು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ವಾಷಿಂಗ್ಟನ್ ನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
 
 
modi in america_vaarte
 
 
ಆಂಡ್ಯೂ ಮೆಲನ್ ಸಭಾಂಗಣದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಶ್ವದ ಅಭಿವೃದ್ಧಿಗೆ ಹೊಸ ಯಂತ್ರಗಳ ಅಗತ್ಯತೆ ಇದೆ. ವಿಶ್ವದ ಅಭಿವೃದ್ಧಿಗೆ ಭಾರತ ಹೊಸ ಯಂತ್ರ ರೂಪಿಸಬೇಕಿದೆ. ಅಮೆರಿಕ ಎಲ್ಲಾ ವಿಚಾರದಲ್ಲೂ ಒಂದು ಹೆಜ್ಜೆ ಮುಂದಿದೆ. ಕಳೆದ 2 ವರ್ಷಗಳಲ್ಲಿ ಭಾರತದ ಅರ್ಥಿಕ ಅಭಿವೃದ್ಧಿಗೆ ಹಲವು ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದು ವಿವರಿಸಿದ್ದಾರೆ.
 
 
ಭ್ರಷ್ಟಾಚಾರವನ್ನು ನಿಯಂತ್ರಿಸಲು ಕಠಿಣ ನಿರ್ಧಾರ ಕೈಗೊಂಡಿದ್ದು, ನಮ್ಮ ಉದ್ದೇಶ ಬದಲಾವಣೆ ಮತ್ತು ಸುಧಾರಣೆಯಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here