ಉದ್ಭವ ಲಿಂಗ ?!

0
256

ರಾಯಚ್ಚೂರು ಪ್ರತಿನಿಧಿ ವರದಿ
ರಾಯಚ್ಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿ ಗ್ರಾಮದ ಮಹಾದೇವಪ್ಪ ಗೌಡರ ಜಮೀನಿನಲ್ಲಿ ಟಿಲ್ಲರ್ ಹೊಡೆಯುವ ಸಂದರ್ಭ ಶಿವಲಿಂಗವೊಂದು ಗೋಚರಿಸಿದೆ.
ಇದೀಗ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಶಿವಲಿಂಗ ಪತ್ತೆಯಾದದ್ದು ತಿಳಿಯುತ್ತಿದ್ದಂತೆಯೇ ತಂಡೋಪತಂಡವಾಗಿ ಜನ ಜಮೀನಿನತ್ತ ಸಾಗುತ್ತಿದ್ದಾರೆ. ಜನ ಭಕ್ತಿ ಭಾವಗಳಿಂದ ಲಿಂಗಕ್ಕೆ ನಮಸ್ಕರಿಸುತ್ತಿದ್ದಾರೆ. ಇದೀಗ ಮಹಾದೇವಪ್ಪ ಅವರ ಜಮೀನು ಪಾವಿತ್ರ್ಯತೆಯ ಕೇಂದ್ರವಾಗಿ ಪರಿವರ್ತಿತಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here