ಉದ್ಘಾಟನಾ ಸಮಾರಂಭ

0
178

ವರದಿ: ಗೋವಿಂದ ಬಳ್ಳಮೂಲೆ
” ಉತ್ತಮ ಪುಸ್ತಕ ವಾಯನಾ ಶೀಲವು ಮನುಷ್ಯನನ್ನು ಮಾನವತೆಯ ಕಡೆಗೆ ಕೊಂಡೊಯ್ಯುತ್ತದೆ. ಗ್ರಂಥಗಳು ಆಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡುತ್ತದೆ ” ಎಂಬುದಾಗಿ ಪಿ. ವಿ. ಕೆ ಪನೆಯಾಲ್ ನುಡಿದರು.
 
 
ಬಳ್ಳಮೂಲೆಯಲ್ಲಿ ಜರಗಿದ ‘ ಮಧುವಾಹಿನಿ ವಾಚನಾಲಯ ಮತ್ತು ಗ್ರಂಥಾಲಯ ‘ ದ ಉದ್ಘಾಟನಾ ಸಮಾರಂಭದಲ್ಲಿ ದೀಪಜ್ವಲನ ಮಾಡುತ್ತಾ ಅವರು ತಮ್ಮ ಭಾಷಣದಲ್ಲಿ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಖಾಲಿದ್ ಬೆಳ್ಳಿಪ್ಪಾಡಿ ಮುಖ್ಯಾತಿಥಿಗಳಾಗಿದ್ದರು.
 
 
ಸಾಹಿತಿ, ಕವಿ , ಪತ್ರಕರ್ತರಾದ ರಾಧಾಕೃಷ್ಣ ಉಳಯತ್ತಡ್ಕ ಪ್ರಧಾನ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಾಚನಾಲಯ ಸದಸ್ಯತನ, ಪುಸ್ತಕಗಳ ಸಂಗ್ರಹ ಅಭಿಯಾನವನ್ನು ಆರಂಭಿಸಲಾಯಿತು. ಗೋವಿಂದಬಳ್ಳಮೂಲೆ ಸಮಾರಂಭದ ಅಧ್ಯಕ್ಷಸ್ಥಾನವಹಿಸಿ ಶುಭಾಶಂಸನೆಯಿತ್ತರು. ಕುಮಾರಿ ವಿದ್ಯಾರತ್ನ ಮತ್ತು ಕುಮಾರಿ ದಿವ್ಯ ಪ್ರಾರ್ಥನೆ ಹಾಡಿದರು. ರಾಘವನ್ ಬೆಳ್ಳಿಪ್ಪಾಡಿ ಸ್ವಾಗತ ಮತ್ತು ಚೆರಿಯೋನ್ ಅವರು ಧನ್ಯವಾದವಿತ್ತರು

LEAVE A REPLY

Please enter your comment!
Please enter your name here