ಉದ್ಘಾಟನಾ ಸಮಾರಂಭ

0
312

ಉಜಿರೆ ಪ್ರತಿನಿಧಿ ವರದಿ
ಜೀವನದಲ್ಲಿ ವಿಷಯವನ್ನು ತಿಳಿಯುವ ಕುತೂಹಲ,ಅಭಿವೃದ್ಧಿಕಡೆ ಗಮನ ಹಾಗೂ ಒಂದುಕಾರ್ಯದ ಬಗ್ಗೆ ಸಮರ್ಪಣ ಭಾವಇದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಉಜಿರೆ ಎಸ್.ಡಿ.ಎಮ್ ವಸತಿ ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಟಿ.ಕೃಷ್ಣಮೂರ್ತಿ ಹೇಳಿದರು.
 
ಅವರು ಉಜಿರೆಎಸ್.ಡಿ.ಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ವಿಭಾಗ ಆಯೋಜಿಸಿದ್ದ 2016-2017ರ ಸಾಲಿನ ಫೀಸ್ ಆಸೋಸಿಯೆಷಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
 
ಕಾರ್ಯಕ್ರಮದಲ್ಲಿ ಆಸೋಸಿಯೆಷಿನ್ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಂ.ವೈ ಮಂಜುಳಾ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಮನಿ ಸ್ವಾಗತಿಸಿದರು. ಮೇಘ ವಂದಿಸಿದರು. ಶೃತಿ ನಿರೂಪಿಸಿದರು.
 
 
‘ವಾಸ್ತವಗಳಿಗಿಂತ ಗಾಸಿಪ್ ಗಳಿಗೆ ಹೆಚ್ಚು ಆದ್ಯತೆ’
ವರದಿ: ಅಂಜಲಿ ಕೆ.ಎಂ
ಗಾಸಿಪ್ ವಿವರಗಳನ್ನು ತಿಳಿದುಕೊಳ್ಳುವ ಕುತೂಹಲವಿರುವ ಕಾರಣಕ್ಕಾಗಿಯೇ ಮಾಧ್ಯಮಗಳು ಅಂತಹ ಸಂಗತಿಗಳಿಗೆ ಆದ್ಯತೆ ನೀಡುತ್ತಿವೆ ಎಂದು ಉದಯ ಮ್ಯೂಸಿಕ್ನ ಸೀನಿಯರ್ ಪ್ರೋಗ್ರಾಮ್ ಪ್ರೊಡ್ಯೂಸರ್ ಕಿರಣ್ಚಂದ್ರ ಅಭಿಪ್ರಾಯಪಟ್ಟರು.
ಎಸ್ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮೀಡಿಯಾ ಮೆಸೆಂಜರ್ ಕ್ಲಬ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಗಾಸಿಪ್ ಸುದ್ದಿಗಳ ವಿರುದ್ಧ ಕಾನೂನು ಸಮರ ನಡೆಸಬಹುದಾದರೂ ಸಲೆಬ್ರಿಟಿಗಳು ಗಾಸಿಪ್ ಗಳಿಗೆ ಆದ್ಯತೆ ನೀಡುವುದಿಲ್ಲ. ಬಹಳ ಸಂದರ್ಭಗಳಲ್ಲಿ ಗಾಸಿಪ್ಗಳಿಂದ ಪ್ರಚಾರ ಸಿಗಬಹುದು ಎಂಬ ನಿರೀಕ್ಷೆ ಇರುತ್ತದೆ. ಗಾಸಿಪ್ ವಿರುದ್ಧ ಧ್ವನಿ ಎತ್ತಿದರೆ ತೊಂದರೆಗೆ ಸಿಲುಕಬಹುದು ಎಂಬ ಭಯ ಸೆಲೆಬ್ರಿಟಿಗಳಲ್ಲಿರುತ್ತದೆ ಎಂದರು.
ರಾಜಕೀಯ ಮತ್ತು ಅಪರಾಧ ವರದಿಗಾರಿಕೆಗಿಂತ ಸಿನಿಮಾ ವರದಿಗಾರಿಕೆ ಹೆಚ್ಚು ಶ್ರಮವನ್ನು ಬೇಡುತ್ತದೆ. ಸಿನಿಮಾ ವರದಿಗಾರನಿಗೆ ಸವಾಲುಗಳು ಹೆಚ್ಚು ಎಂದು ಹೇಳಿದರು.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗ್ಡೆ ಉಪಸ್ಥಿತರಿದ್ದರು. ಶಿವಮಲ್ಲಯ್ಯ ಸ್ವಾಗತಿಸಿದರು. ಸುಷ್ಮಾ ಉಪ್ಪಿನ್ ವಂದಿಸಿದರು.

LEAVE A REPLY

Please enter your comment!
Please enter your name here