ಪ್ರಮುಖ ಸುದ್ದಿವಾರ್ತೆವಿದೇಶ

ಉತ್ತರ ಕೊರಿಯಾಕ್ಕೆ ಮತ್ತೆ ಹಿನ್ನಡೆ

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಮತ್ತೆ ಮುಖಭಂಗವಾಗಿದೆ. ಉ.ಕೊರಿಯಾದ ಬಹು ನಿರೀಕ್ಷಿತ ಕ್ಷಿಪಣಿ ಪರೀಕ್ಷೆ ವಿಫಲವಾಗಿದೆ ಎಂದು ಸಿಯೋಲ್ ವರದಿ ಮಾಡಿದೆ.
 
 
 
ಅಮೆರಿಕ-ಜಪಾನ್ ದೇಶಗಳ ಸೇನಾನೆಲೆಗಳ ಗುರಿಯನ್ನು ಮುಟ್ಟಬಲ್ಲ ಕ್ಷಿಪಣಿ ತಯಾರಿಕೆಗೆ ಉತ್ತರ ಕೊರಿಯಾ ಕೈ ಹಾಕಿ, ವಿಶ್ವ ಸಮುದಾಯದ ವಿರೋಧದ ನಡುವೆಯೇ ಉತ್ತರ ಕೊರಿಯಾ ಕ್ಷಿಪಣಿ ತಯಾರಿಕೆ ಮುಂದುವರೆಸಿತ್ತು. ಆದರೆ ಇಂದು ನಡೆದ ಪರೀಕ್ಷೆಯಲ್ಲಿ ಬಹು ನಿರೀಕ್ಷಿತ ಕ್ಷಿಪಣಿ ವಿಫಲವಾಗಿದೆ.
 
 
 
ನಿಗದಿತ ಗುರಿಯನ್ನು ತಲುಪುವಲ್ಲಿ ಕ್ಷಿಪಣಿ ವಿಫಲವಾಗಿದ್ದು, ಗುರಿಯಿಂದ ತನ್ನ ಮಾರ್ಗ ಬದಲಿಸಿ ಸ್ಫೋಟವಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಬುಧವಾರ ಸುಮಾರು 4ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿದೆ. ಈ ಎಲ್ಲ ಕ್ಷಿಪಣಿಗಳೂ ವಿಫಲವಾಗಿದೆ ಎಂದು ಜಪಾನ್ ನ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
 
 
 
ಆದರೆ ಉತ್ತರ ಕೊರಿಯಾ ಮಾತ್ರ ತನ್ನ ಕ್ಷಿಪಣಿ ಪರೀಕ್ಷೆ ವಿಫಲವಾದುದರ ಕುರಿತಂತೆ ಉತ್ತರ ಕೊರಿಯಾ ಈ ವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here