ಉತ್ತರಾಖಂಡದಲ್ಲಿ ಮೇಘಸ್ಫೋಟ

0
153

ವರದಿ: ಲೇಖಾ
ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ.
ಛಮೋಲಿ ಹಾಗೂ ಪಿಥೋರ್ ಘಡದಲ್ಲಿ ಸಂಭವಿಸಿದ ಮಳೆ ಮತ್ತು ಪ್ರವಾಹದಿಂದಾಗಿ ಈ ವರೆಗೂ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 25ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
 
 
 
ಛಮೋಲಿಯಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 54 ಮಿ.ಮೀ ಮಳೆಯಾಗಿದ್ದು, 14ಜನರು ಸಾವನ್ನಪ್ಪಿದ್ದಾರೆ. ಮಂದಾಕಿನಿ ನದಿಯ ದಡದ ಸಮೀಪವಿರುವ ಹಲವು ಮನೆಗಳು ಈಗಾಗಲೇ ಜಲಾವೃತವಾಗಿವೆ. ಗೋಪೇಶ್ವರದಲ್ಲಿರುವ ಹಲವು ಮನೆಗಳು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ನದಿಗಳ ನೀರಿನ ಪ್ರಮಾಣ ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
 
 
 
ಮಳೆಯಿಂದಾಗಿ ಅಲ್ಕಾನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದಲ್ಲಿರುವ ವಿವಿಧ ಅಣೆಕಟ್ಟುಗಳು ಎಲ್ಲ ಬಾಗಿಲುಗಳನ್ನು ಏಕಕಾಲಕ್ಕೆ ತೆರೆದು ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಸುವಾ ಗ್ರಾಮವನ್ನು ಕಲ್ಪಿಸುವ ಮೂರು ಪ್ರಮುಖ ಮೇಲ್ಸೇತುವೆಗಳು ನೀರಿನ ರಭಸಕ್ಕೆ ಮತ್ತು ಭೂಕುಸಿತದಿಂದಾಗಿ ಕೊಚ್ಚಿ ಹೋಗಿದ್ದು, ಕೇದಾರನಾಥ ದೇವಾಲಯ ಸಂಪರ್ಕಿಸುವ ಗಂಗೋಲ್ ಗಾಂವ್ ಹೆದ್ದಾರಿ ಕೂಡ ಭೂಕುಸಿತದಿಂದ ಸ್ಥಗಿತಗೊಂಡಿದೆ.
 
 
 
ಪಿಥೋರ್ ಘಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ರಸ್ತೆ ಸಂಚಾರ ಅಸ್ಥವ್ಯಸ್ಥವಾಗಿದ್ದು, ಪಿಥೋರ್ ಘಡ ಮತ್ತು ಯಮುನೋತ್ರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಸ್ಥಗಿತವಾಗಿದೆ.
ಭೂಕುಸಿತದಲ್ಲಿ ಹಲುವ ಮನೆಗಳು ಕುಸಿದಿದ್ದು, ಅಪಾಯದಲ್ಲಿ ಸಿಲುಕಿರುವ ನೂರಾರು ನಾಗರಿಕನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಭರದಿಂದ ಸಾಗಿದೆ.

LEAVE A REPLY

Please enter your comment!
Please enter your name here