ಉತ್ತಮ ಮಳೆಯಾಗುವ ನಿರೀಕ್ಷೆ

0
281

 
ಬೆಂಗಳೂರು ಪ್ರತಿನಿಧಿ ವರದಿ
ಈ ವರ್ಷ ಉತ್ತಮ ಮಾನ್ಸೂನ್ ಮಳೆ ಆಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿಗಳು ಸತತ ಎರಡು ವರ್ಷ ಬರಗಾಲದಿಂದ ಬೆಂದಿರುವ ದೇಶದ ಜನರಿಗೆ ಇದು ಸಂತಸದ ಸುದ್ದಿಯಾಗಿದೆ. ಎರಡು ವರ್ಷದ ಬಳಿಕ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
 
 
 
ದೀರ್ಘಾವಧಿ ಸರಾಸರಿಯ್ಲಲಿ ಈ ಬಾರಿಯ ಮುಂಗಾರು ಶೇ.106ರಷ್ಟಿದೆ. ಸಾಮಾನ್ಯದಿಂದ ಅಧಿಕ ಮಳೆಯಾಗುವ ಸಾಧ್ಯತೆ ಈ ಶೇ.94ರಷ್ಟಿದೆ. ಅಲ್ಲದೆ ಮುಂಗಾರು ಮಳೆ ದೇಶಾದ್ಯಂತ ಸೂಕ್ತ ರೀತಿಯಲ್ಲಿ ಹಂಚಿಕೆಯಾಗಲಿದೆ.
 
 
ಆದರೆ ಈಶಾನ್ಯ ಹಾಗೂ ಆಗ್ನೇಯ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಮುಂಗಾರಿ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲೂ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here