ಉತ್ತಮ ಆಡಳಿತ ಮಾದರಿ ಅಳವಡಿಸಿ: ಡಾ ವಿಶಾಲ್

0
222

 
ಉಡುಪಿ ಪ್ರತಿನಿಧಿ ವರದಿ
ರಾಜ್ಯದ ಇತರೆ ಪ್ರಾಧಿಕಾರಗಳಲ್ಲಿನ ಉತ್ತಮ ಆಡಳಿತ ಮಾದರಿಗಳನ್ನು ಅರಿತು ಅಳವಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಾ ವಿಶಾಲ್ ಆರ್ ತಿಳಿಸಿದರು.
 
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳ ಅಯುಕ್ತರು ಹಾಗೂ ನಗರ ಯೋಜನಾ ಸದಸ್ಯರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಹಮ್ಮಿಕೊಂಡ ಎರಡು ದಿನಗಳ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
 
ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ನಿರಂತರ ಕಲಿಯುವಿಕೆಯಿಂದ ಆಗಬಹುದಾದ ಅನುಕೂಲಗಳ ಬಗ್ಗೆ ವಿವರಿಸಿದರು.
 
 
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರಾದ ತಿರುಕನಗೌಡರ್ ಅವರು ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಕುರಿತು ಉಪನ್ಯಾಸ ನೀಡಿದರು. ನಗರಾಭಿವೃದ್ಧಿ ಯೋಜನಾ ಸಂಸ್ಥೆ ಮೈಸೂರು ಮಾಸ್ಟರ್ ಪ್ಲಾನ್ ಇವರು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಕುಮಾರ್ ಜಂಟಿ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಮೈಸೂರು ವಲಯ ಇವರು ವಲಯ ನಿಯಮಾವಳಿ ಮತ್ತು ಮಾಸ್ಟರ್ ಪ್ಲಾನ್ ಅನುಷ್ಟಾನ ಕುರಿತು ಉಪನ್ಯಾಸ ನೀಡಿದರು. ಸರ್ಕಾರದ ಸಲಹೆಗಾರರಾದ ಶ್ರೀಹರಿ ಇವರು ಪಬ್ಲಿಕ್ ಟ್ರಾನ್ಸಪೋರ್ಟ್, ರೋಡ್ ಸೇಫ್ಟಿ, ಸೈನೇಜ್ಸ್ ಬಗ್ಗೆ ಉಪನ್ಯಾಸ ನೀಡಿದರು.
 
 
ಜಂಟಿ ನಿರ್ದೇಶಕರಾದ ಮುರಳಿ ಅವರು ಪ್ಲಾನಿಂಗ್ ಮತ್ತು ಮ್ಯಾನೇಜ್ಮೆಂಟ್ ಆಫ್ ಹೆರಿಟೇಜ್ ಬಗ್ಗೆ ಉಪನ್ಯಾಸ ನೀಡಿದರು. ಚಾರ್ಟೆಡ್ ಅಕೌಂಟೆಂಟ್ ಶ್ರೀ ಗಣೇಶ್ ವೈ ಅವರು ಪ್ರಾಧಿಕಾರ ನಿರ್ವಹಿಸಬೇಕಾಗಿರುವ ಲೆಕ್ಕ ಪುಸ್ತಕರ ನಿರ್ವಹಣೆ ಹಾಗೂ ಪ್ರಾಧಿಕಾರಗಳಿಗೆ ಅನ್ವಯವಾಗುವ ಆದಾಯ ಕರ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ 12 ಪ್ರಾಧಿಕಾರಗಳಿಂದ ಅಧಿಕಾರಿಗಳು ಹಾಗೂ ಉಡುಪಿ ನಗರದ ವಾಸ್ತುಶಿಲ್ಪಿಗಾರರು, ಇಂಜಿನಿಯರ್ ಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here