ಉಡ ಬೇಟೆಗಾರರ ಬಂಧನ

0
704

ಚಿಕ್ಕಮಗಳೂರು ಪ್ರತಿನಿಧಿ ವರದಿ
ಬಾಳೆಹೊನ್ನೂರು ಅರಣ್ಯದಲ್ಲಿ ಇಬ್ಬರು ಉಡ ಬೇಟೆಗಾರರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಸೆರೆಯಾಗಿದೆ.
 
 
 
ಬಾಳೆಹೊನ್ನೂರಿನ ಪ್ರವೀಣ್, ಸೈಫ್ ಬಂಧಿತ ಬೇಟೆಗಾರರಾಗಿದ್ದಾರೆ. ಪರಾರಿಯಾಗಿರುವ ಅಪ್ಪ, ನವೀನ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇವರು ಹೊಸ ವರ್ಷದ ಸಂಭ್ರಮಕ್ಕಾಗಿ ಕಳಸಾ ರಸ್ತೆಯ ಹಲಸೂರು ಕಾಫಿ ತೋಟದಲ್ಲಿ ಉಡ ಬೇಟೆಯಾಡಿದ್ದರು.
 
 
 
ಬೇಟೆಯಾಡಿದ ಉಡಗಳ ಜತೆ ಫೋಟೋ ತೆಗೆದು ವಿಕೃತ ಸಂಭ್ರಮ ಆಚರಿಸಿದ್ದರು. ಅರಣ್ಯ ಸಿಬ್ಬಂದಿ, ಪೊಲೀಸರು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

LEAVE A REPLY

Please enter your comment!
Please enter your name here