ಪ್ರಮುಖ ಸುದ್ದಿರಾಜ್ಯವಾರ್ತೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬೇಕಿದೆ ಸಮರ್ಥ ನಾಯಕ

ಮಂಗಳೂರು:  ನರೇಂದ್ರ ಮೋದಿಯವರ ನವ ಭಾರತ ಕಟ್ಟುವ ಕಾರ್ಯದಲ್ಲಿ ಈಡಿ ದೇಶ ಅವರ ಬೆನ್ನಿಗಿದೆ, ಕಾಲಿಗೆ ಚಕ್ರ ಕಟ್ಟಿದಂತೆ ದೇಶ ವಿದೇಶಿ ಸುತ್ತಿ ಇಂದು ಭಾರತ ವಿಶ್ವದ ಅತ್ಯಂತ ಬಲಿಷ್ಠ ಅರ್ಥಿಕ, ಸುಭದ್ರ ರಾಷ್ಟವಾಗುತ್ತ ಸಾಗುತ್ತಿದೆ , ಹಾಗೆ ನಮ್ಮ ಕ್ಷೇತ್ರಕ್ಕೂ ನರೇಂದ್ರ ಮೋದಿಯವರ ವೇಗಕ್ಕೆ ಸರಿ ಹೊಂದುವ ಸಮರ್ಥ ನಾಯಕನ ಕೂಗೂ ಕಾರ್ಯಕರ್ತರಲ್ಲಿ ಏಲ್ಲೆಡೆ ಕೇಳಿ ಬರುತ್ತಿದೆ .

 

ಶ್ರೀಕಂಠಪ್ಪ : ಹಿಂದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಡಿ ಸಿ ಶ್ರೀಕಂಠಪ್ಪ 3 ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಪಕ್ಷದಲ್ಲಿ ಸಮರ್ಥವಾಗಿ ದುಡಿದು ಇಂದು ಚಿಕ್ಕಮಗಳೂರುನಾದ್ಯಂತ ಗ್ರಾಮಪಂಚಾಯಿತಿ ಯಿಂದ ಹಿಡಿದು ಲೋಕಸಭೆ ವರೆಗೂ ಸಂಪೂರ್ಣ ಗೆದ್ದಿದೆ ಅಂದರೆ ಮೂಲ ಶ್ರೀಕಂಠಪ್ಪ ನವರು, ಅವರ ಕಾಲದ ನಂತರ ಕ್ಷೇತ್ರ ಮರು ವಿಗಂಡನೆಯಾಗಿ ಉಡುಪಿ ಜಿಲ್ಲೆಯೂ ಸೇರಿತು, ನಂತರ ಸದಾನಂದ ಗೌಡರು ಸಂಸದರಾದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದು ಇತಿಹಾಸ.

 

ತರುವಾಯ ಉಪಚುನಾವಣೆಯಲ್ಲಿ ಸುನಿಲ್ ಕುಮಾರ್ ರನ್ನು ಸೋಲಿಸಿ ಜಯ ಪ್ರಕಾಶ್ ಹೆಗಡೆಯವರು ಕಾಂಗ್ರೆಸ್ ನಿಂದ ಸಂಸದರಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶೋಭಾ ಕರಂದ್ಲಾಜೆ ಅವರು ಆಯ್ಕೆಯಾದರು, ರಾಜ್ಯ ರಾಜಕಾರಣ ದಲ್ಲಿ ಶೋಭ ಕಾರಂದ್ಲಾಜೆಯವರಿಗೆ ಆಸಕ್ತಿ ಇದ್ದು ಇತ್ತ ದೇಶದಲ್ಲಿ ನರೇಂದ್ರ ಮೋದಿ ವೇಗದ ಸಮರ್ಥ ಆಡಳಿತ ನೀಡುತ್ತಿರುವಾಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸಂಸದರು ಬಹಳ ದೂರ ಆದಂತಾಗಿದೆ, ರಾಜ್ಯ ಬಿಜೆಪಿಯಲ್ಲಿನ ಶೋಭ ಕಾರಂದ್ಲಾಜೆಯವರಿಗೆ ಆಸಕ್ತಿ ಹಾಗೂ ಕೆಲಸದ ಒತ್ತಡದಿಂದಾಗಿ ಅವರು ಕ್ಷೇತ್ರದ ಸಂಪರ್ಕ ಬಹಳ ಕಡಿಮೆ ಆಯಿತು .


ಉಡುಪಿ ಚಿಕ್ಕಮಗಳೂರು ಕ್ಷೇತ್ರ ಒಂದು ಕಡೆ ತರೀಕೆರೆ ಚಿಕ್ಕಮಗಳೂರು ಬಯಲುಸೀಮೆ ಆದರೆ ಮೂಡಿಗೆರೆ, ಶೃಂಗೇರಿ , ಕೊಪ್ಪ ,ಎನ್ಆರ್ ಪುರ ತಾಲೂಕ್ ಗಳು ಮಲೆನಾಡು, ಕಾರ್ಕಳ ಉಡುಪಿ ಕುಂದಾಪುರ ಸೇರಿದಂತೆ ಉಡುಪಿ ಜಿಲ್ಲೆ ಮೀನುಗಾರಿಕೆ ಯಾಗಿದ್ದು ಕ್ಷೇತ್ರದಲ್ಲಿ ಹಲವಾರು ವಾಣಿಜ್ಯ ಬೆಳೆಗಳು ಇದ್ದು ಆಗಾಗ ದೊಡ್ಡ ಮಟ್ಟದ ಬೆಲೆ ಕುಸಿತದಿಂದಾಗಿ ದೊಡ್ಡ ಹೋರಾಟಗಳು ನಡೆಯುತ್ತಿರುತ್ತವೆ.

ಒಂದೆಡೆ ಬಯಲುಸೀಮೆಯ ನೀರಿನ ಪರದಾಟ ಮಳೆ ಅಭಾವ ಮತ್ತೊಂದೆಡೆ ಮಲೆನಾಡಿನಲ್ಲಿ ಅತಿಯಾದ ಮಳೆ ಅತಿವೃಷ್ಟಿ ಹೀಗೆ ಹಲವಾರು ಸಮಸ್ಯೆಗಳನ್ನು ಹೆಚ್ಚಿರುವ ಕ್ಷೇತ್ರ ಕ್ಷೇತ್ರದಲ್ಲಿ ಸಂಸದರು ಸಮಸ್ಯೆ ಗಳಿಗೆ ಧ್ವನಿಯಾಗಿ ಹಾಗೂ ದೆಹಲಿಯಲ್ಲಿ ಇಲ್ಲಿನ ಹಲವಾರು ಜ್ವಲಂತ ಸಮಸ್ಯೆಗಳ ವಿಚಾರಧಾರೆಗಳನ್ನು ಮುನ್ನಡೆಸುವ ಸಮರ್ಥ ನಾಯಕನ ಅವಶ್ಯಕತೆ ಇದ್ದು ಈ ಬಾರಿ ಅಂತ ನಾಯಕನ ಹುಡುಕಾಟದಲ್ಲಿ ಕ್ಷೇತ್ರದ ಕಾರ್ಯಕರ್ತರ ಮನಸ್ಸಿದೆ.


ಒಂದೆಡೆ ದೇಶದಲ್ಲಿ ನರೇಂದ್ರ ಮೋದಿ ವೇಗದಲ್ಲಿ ಅಭಿವೃದ್ಧಿ ನಡೆಯುತ್ತಿದ್ದರೆ ಮತ್ತೋಂಡೆ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಬಹಳ ಹಿಂದೆ ಬಿದ್ದಿದೆ ,ಹಿಂದೆ ಡಿಸಿ ಶ್ರೀಕಂಠಪ್ಪ ನವರು ಕಾರ್ಯಕರ್ತರಿಗೆ ಬಹಳ ಆಪ್ತವಾಗಿ ಪಕ್ಷ ಕಟ್ಟುವಲ್ಲಿ ಹಾಗೂ ಯಾವುದೇ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ,ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹಿಂದುತ್ವ ನೆಲಗಟ್ಟಿರುವ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕ್ಕೆ ಬಿಜೆಪಿ ಕಾರ್ಯಕರ್ತನ ಒಲವಿದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಹಳ ಅಲೆ ಇದ್ದು ಅದನ್ನು ಉಪಯೋಗಿಸಿಕೊಳ್ಳುವ ಹಾಗೂ ಹಿಂದುತ್ವದ ಆಧಾರದಲ್ಲಿ ಮುನ್ನಡೆಸಬಲ್ಲ ಸಮರ್ಥ ನಾಯಕನ ಅವಶ್ಯಕತೆ ಇದ್ದು , ಈಗಾಗಲೆ ಸಂಭಾವ್ಯರ ಪಟ್ಟಿಯಲ್ಲಿರುವ ಯಶಪಾಲ್ ಸುವರ್ಣ ಆಯ್ಕೆ ಆಗುವುದು ಖಚಿತ. ಈಗಾಗಲೇ ಹಲವಾರು ಜನಪರ ಹೋರಾಟಗಳು 2 ದೊಡ್ಡ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿ ಜನ ಮನ್ನಣೆ ಗಳಿಸಿದ್ದಾರೆ. ಬಿಜೆಪಿ ಹಲವಾರು ಹೋರಾಟಗಳನ್ನು ಸಂಘಟಿಸಿ 2 ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ನಾಯಕನಾಗಿ ಅತ್ಯಂತ ಸಮರ್ಥವಾಗಿ ತಮ್ಮ ಕಾರ್ಯದಕ್ಷತೆ ನಿರ್ವಹಿಸಿರುವ ಯಶಪಾಲ್ ಸುವರ್ಣ ಸೂಕ್ತ ಅಭ್ಯರ್ಥಿ.
ಅಜೇಯ ಭಾರತ – ಅಟಲ್ ಬಿಜೆಪಿ
ಮೋದಿ ಮತ್ತೊಮ್ಮೆ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here