ವರದಿ-ಚಿತ್ರ: ಗೋವಿಂದ ಬಿಜಿ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯದಂತೆ ಮುಳ್ಳೇರ್ಯ ಮಂಡಲ ವ್ಯಾಪ್ತಿಯ ಕುಂಬಳೆ ಹವ್ಯಕ ವಲಯ ಹಾಗೂ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಇವರ ಸಂಯುಕ್ತ ಆಶ್ರಯದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ರಕ್ತದ ಗುಂಪು ವರ್ಗೀಕರಣ, ಮಧುಮೇಹ, ದಂತ ತಪಾಸಣೆ ಹಾಗೂ ನೇತ್ರ ತಪಾಸಣಾ ಉಚಿತ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮವು ಜರಗಿತು.
ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಡಾ.ಶ್ರೀಧರ ಭಟ್ ಅವರು ದೀಪಜ್ವಲನ ಮಾಡಿದರು. ಯಚ್. ಸತ್ಯಶಂಕರ ಭಟ್ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೃಷ್ಣ ಮೋಹನ ಭಟ್ ಅವರು ಅಧ್ಯಕ್ಷಸ್ಥಾನ ವಹಿಸಿದರು. ಸತ್ಯನಾರಾಯಣ ಭಟ್ ಮೊಗ್ರ ಅವರು ಶುಭಾಶಂಸನಾ ಭಾಷಣ ಮಾಡಿದರು.
ನೇತ್ರ ಚಿಕಿತ್ಸಾಲಯದಲ್ಲಿ ಬಹಳ ವರ್ಷ ಉಚಿತವಾಗಿ ವೈದ್ಯಕೀಯ ಸೇವೆಯನ್ನಿತ್ತು ಸಹಕರಿಸಿದ ಡಾ. ಶ್ರೀರಾಮ ಕೆ.ವಿ ಮತ್ತು ಡಾ. ವಾರುಣಿ ಶ್ರೀರಾಮ ದಂಪತಿಯನ್ನು ಶಾಲು ಹೊದೆಸಿ ಮಾನಪತ್ರ ಮತ್ತು ಫಲವನ್ನಿತ್ತು ಸನ್ಮಾನಿಸಲಾಯಿತು. ಶಿವಕುಮಾರಿ ಮತ್ತು ಪದ್ಮಾವತಿ ಡಿ. ಪಿ. ಭಟ್ ಮಾನ ಪತ್ರ ವಾಚಿಸಿದರು. ಮಧುಮೇಹ ತಪಾಸಣೆ ಮತ್ತು ರಕ್ತದ ಗುಂಪು ನಿರ್ಣಯವನ್ನು ಕಾಸರಗೋಡಿನ ರಮೇಶ ಕ್ಲಿನಿಕ್ ಲ್ಯಾಬ್ ನವರು ನಡೆಸಿದರು. ಡಾ. ಆನಂದ, ಡಾ. ಡಿ. ಪಿ. ಭಟ್, ಡಾ. ಅಶ್ವಿನ್, ಡಾ. ಮೈತ್ರಿ ಅವರು ಶಿಬಿರ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಬಾಲಕೃಷ್ಣ ಶರ್ಮ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ವೈ. ವಿ. ರಮೇಶ್ ಧನ್ಯವಾದವಿತ್ತರು.