ಉಚಿತ ಬೈಸಿಕಲ್ ವಿತರಿಸಲು ಸಂಪುಟ ನಿರ್ಧಾರ

0
123

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ 188 ಕೋಟಿ ರೂ. ವೆಚ್ಚದಲ್ಲಿ ಐದು ಲಕ್ಷ ಬೈಸಿಕಲ್‍ಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಬೈಸಿಕಲ್‍ಗಳ ಖರೀದಿ ಪ್ರಕ್ರಿಯೆಯಲ್ಲಿ ನೆರೆ ರಾಜ್ಯಗಳ ದರಗಳಲ್ಲಿನ ಸ್ಪರ್ಧಾತ್ಮಾಕ ಬೆಲೆಗಳು ಹಾಗೂ ಅಂಶಗಳನ್ನು ಗಮನದಲ್ಲಿರಿಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಸಂಪುಟವು ಸೂಚಿಸಿದೆ.
 
 
 
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಭಾ ನಿರ್ಣಯಗಳ ಮುಖ್ಯಾಂಶಗಳನ್ನು ಪ್ರಕಟಿಸಿದ ಉನ್ನತ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪ್ರತಿವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಬೈಸಿಕಲ್ ದರಗಳಲ್ಲಿ ತೀವ್ರ ಏರಿಕೆ ಉಂಟಾಗುತ್ತಿದೆ. ಇತರೆ ರಾಜ್ಯಗಳಲ್ಲಿ ಖರೀದಿಸಿರುವ ದರಗಳನ್ನು ಗಮನಿಸಿ ಅಧಿಕ ಪ್ರಮಾಣದಲ್ಲಿ ಬೈಸಿಕಲ್‍ಗಳನ್ನು ಉತ್ಪಾದನೆ ಮಾಡುವ ಕಂಪನಿಯಿಂದಲೇ ಬೈಸಿಕಲ್‍ಗಳನ್ನು ಪಾರದರ್ಶಕವಾಗಿ ಖರೀದಿಸಲು ಟೆಂಡರ್‍ನ ಮಾನದಂಡಗಳಲ್ಲಿ ಕೆಲವು ಧನಾತ್ಮಕ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಎಂದರು.

LEAVE A REPLY

Please enter your comment!
Please enter your name here