ಉಚಿತ ತರಬೇತಿಗಳು

0
546

 
ವರದಿ: ಸುನೀಲ್ ಬೇಕಲ್
ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು:
 
 
1. ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ: 16-06-2016 ರಿಂದ 25-06-2016(10 ದಿನಗಳು)
2. ಸಿಸಿ ಕ್ಯಾಮರ ಅಳವಡಿಕೆ ಸ್ಮಾರ್ಟ್ ಪೋನ್ ರಿಪೇರಿ: 30.06.2016 ರಿಂದ 14-07-2016 (15 ದಿನಗಳು)
3. ಕಂಪ್ಯೂಟರ್ ಟ್ಯಾಲಿ : 04.07.2016 ರಿಂದ 02-08-2016 (30 ದಿನಗಳು)
4. ಬ್ಯೂಟಿ ಪಾರ್ಲರ್ ಮೇನೇಜ್ಮೆಂಟ್ : 11.07.2016 ರಿಂದ 09-08-2016 (30 ದಿನಗಳು)
5. ಡಾಟಾ ಎಂಟ್ರಿ ಆಪರೇಷನ್ : 03.08.2016 ರಿಂದ 02-09-2016 (30 ದಿನಗಳು)
6. ಫ್ಯಾಷನ್ ಡಿಸೈನಿಂಗ್ (ಮಹಿಳೆಯರಿಗೆ) : 10.08.2016 ರಿಂದ 08-09-2016 (30 ದಿನಗಳು)
7. ಗೃಹ ಬಳಕೆಯ ವಿದ್ಯುತ್ ಉಪಕರಣಗಳ ರಿಪೇರಿ : 25.08.16 ರಿಂದ 08-09-2016 (30 ದಿನಗಳು)
(ಫ್ಯಾನ್, ಮಿಕ್ಸಿ ಮತ್ತು ಇತರ ಎಲೆಕ್ಟ್ರಿಕಲ್ ರಿಪೇರಿ)
8. ಟಿವಿ (ಎಲ್ಇಡಿ) ಮತ್ತು ಎಲೆಕ್ಟ್ರೋನಿಕ್ಸ್ ಗಳ ರಿಪೇರಿ : 01.09.2016 ರಿಂದ 30-09-2016 (30 ದಿನಗಳು)
9. ಗ್ರಾಮೀಣ ಉದ್ಯಮಶೀಲತಾ ತರಬೇತಿ : 19.09.16 ರಿಂದ 30-09-2016 (30 ದಿನಗಳು)
(ವ್ಯಾಪಾರ ಮತ್ತು ಉದ್ಯಮ ನಿರ್ವಹಣೆ)
 
 
 
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು.
 
 
 
ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್ ಸೈಟ್ ನಿಂದ (www.rudsetitraining.org) ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here