ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

0
229

ಉಡುಪಿ ಪ್ರತಿನಿಧಿ ವರದಿ
ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ಮತ್ತು ಕಾಯಚಿಕಿತ್ಸಾ ವಿಭಾಗದ ವತಿಯಿಂದ ದಿನಾಂಕ.06.02.2017 ರಿಂದ ದಿನಾಂಕ.11.02.2017 ರವರೆಗೆ ಅಮ್ಲ ಪಿತ್ತ (ಆಸಿಡಿಟಿ) ಮತ್ತು ಸಂಧಿವಾತ(ಮೊಣಕಾಲು ಗಂಟುನೋವು) ರೋಗಗಳ ಉಚಿತ ತಪಾಸಣೆ, ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವು ಸಂಸ್ಥೆಯ ಹಿರಿಯ ವೈದ್ಯರಾದ ಡಾ|| ಶ್ರೀಪತಿ ಆಚಾರ್ಯರವರಿಂದ ಉದ್ಘಾಟನೆಗೊಂಡಿತು.
 
 
 
ಸಂಸ್ಥೆಯ ವೈದ್ಯರಾದ ಡಾ|| ಅಜಿತ್ ಕೆ.ಎಸ್. ಡಾ|| ರಜನೀಶ್ ವಿ. ಗಿರಿ, ಡಾ|| ಚಂದ್ರಕಾಂತ್, ಡಾ|| ಧನೇಶ್ವರಿ, ಅಧ್ಯಕ್ಷರ ಆಪ್ತಸಹಾಯಕರಾದ ಶ್ರೀ ಯೋಗೀಶ್ ಶೆಟ್ಟಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ| ಹಾರಿಕಾ, ಮತ್ತು ಡಾ| ರಂಜುಭಾಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಶಿಬಿರವು ದಿನಾಂಕ ರವರೆಗೆ 11.02.2017 ನಡೆಯಲಿದೆ.

LEAVE A REPLY

Please enter your comment!
Please enter your name here