ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

0
299

ಉಡುಪಿ ಪ್ರತಿನಿಧಿ ವರದಿ
ನಾವು ತೆಗೆದುಕೊಳ್ಳುವ ಔಷಧಿಗಳು ನಮ್ಮಆರೋಗ್ಯವನ್ನು ಉತ್ತಮಗೊಳಿಸುವಂತೆ ಇರಬೇಕು ಮತ್ತು ಯಾವುದೇ ತರಹದ ದುಷ್ಪರಿಣಾಮಗಳು ಇರಬಾರದು. ಆಯುರ್ವೇದ ಔಷಧಿಗಳ ಸೇವನೆಯಿಂದಯಾವುದೇ ದುಷ್ಪರಿಣಾಮಗಳು ಇರುವುದಿಲ್ಲ. ಮುನಿಯಾಲು ಆಸ್ಪತ್ರೆಯಲ್ಲಿ ದೊರೆಯುವ ಔಷಧಿಗಳು ಮತ್ತು ಆಸ್ಪತ್ರೆಯ ವಾತಾವರಣವು ಉತ್ತಮವಾಗಿದೆ ಎಂದು ನನ್ನ ಸ್ವಾನುಭವದಿಂದ ಹೇಳುತ್ತೇನೆ ಎಂದು ಪರ್ಕಳದ ಕೇಶವಾನಂದ ಸ್ವಾಮೀಜಿ ಅವರು ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಎನ್.ಎಸ್.ಎಸ್ ಘ ಟಕ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸ್ವರ್ಣ ಮಹೋತ್ಸವ ಸಮಿತಿ (ರಿ), ಪರ್ಕಳ ಇದರ ಜಂಟಿ ಆಶ್ರಯದಲ್ಲಿ ಜ.26ರಂದು ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ನಡೆದ ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
 
 
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸ್ವರ್ಣ ಮಹೋತ್ಸವ ಸಮಿತಿ (ರಿ)ಯ ಅಧ್ಯಕ್ಷರಾದ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ಸಂಪರ್ಕ ಅಧಿಕಾರಿ ದಿನೇಶ್ ಹೆಗ್ಡೆ ಅತ್ರಾಡಿ, ಕೋಶಾಧಿಕಾರಿ ಪ್ರಮೋದ್ ಕುಮಾರ್, ಮುನಿಯಾಲ್ ಆಸ್ಪತ್ರೆಯ ವೈದ್ಯರಾದ ಡಾ.ರಮೇಶ್, ಡಾ.ರೆಜು ಕೃಷ್ಣ, ಡಾ.ಬಿಬಿನ್, ಡಾ.ನಿವೇದಿತಾ, ಡಾ.ಸರಿತಾ, ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಹಾಜರಿದ್ದರು. ಹರಿಪ್ರಸಾದ್ ಭಟ್,ಹೆರ್ಗ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು 100ಕ್ಕೂ ಅಧಿಕ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here