ಉಗ್ರ ಇಮ್ರಾನ್ ಗೆ ಜೀವಾವಧಿ ಶಿಕ್ಷೆ

0
392

ಬೆಂಗಳೂರು ಪ್ರತಿನಿಧಿ ವರದಿ
ಲಷ್ಕರ್ ಎ ತೋಯ್ಬಾ ಸಂಘಟನೆಯ ಭಯೋತ್ಪಾದಕ ಇಮ್ರಾನ್ ಬಿಲಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ 56ನೇ ಸೆಷನ್ಸ್ ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿದೆ.
 
 
ಇಮ್ರಾನ್ ವಿರುದ್ಧ 8 ಸೆಕ್ಷನ್ ಗಳನ್ನು ಹಾಕಲಾಗಿತ್ತು. ಅದರಲ್ಲಿ 3 ಸೆಕ್ಷನ್ ಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಳಿದ ಸೆಕ್ಷನ್ ಗಳ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಯ ಜತೆಗೆ ಕೋರ್ಟ್ ದಂಡ ಕೂಡ ವಿಧಿಸಿದೆ.
 
 
 
ಬೆಂಗಳೂರಿನ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ಹಿನ್ನೆಲೆಯಲ್ಲಿ ಪೊಲೀಸರು 2007ರಲ್ಲಿ ಇಮ್ರಾನ್ ಬಿಲಾಲ್ ನನ್ನು ಬಂಧಿಸಿದ್ದರು. ಆತನಿಂದ ಎಕೆ 56, ಗ್ರೆನೇಡ್, ಸ್ಯಾಟಲೈಟ್ ಪೋನ್ ಗಳನ್ನು ಜಪ್ತಿ ಮಾಡಲಾಗಿತ್ತು.
 
 
ನಿನ್ನೆ ಕೋರ್ಟ್ ಉಗ್ರ ಬಿಲಾಲ್ ಅಪರಾಧಿ ಎಂದು ತೀರ್ಪು ನೀಡಿತ್ತು. ಇಂದು ಸೆಷನ್ಸ್ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ನ್ಯಾಯಾಧೀಶ ಕೊಟ್ರಯ್ಯ ಎಂ ಹಿರೇಮಠ್ ತೀರ್ಪು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here