ಉಗ್ರರ ಬೆದರಿಕೆ: ಪ್ರಾಚ್ಯ ದೇಗುಲಗಳಿಗೆ ಭಾರಿ ಸೆಕ್ಯೂರಿಟಿ

0
229

 
ಹಾಸನ ಪ್ರತಿನಿಧಿ ವರದಿ
ರಾಜ್ಯದ ಪ್ರಾಚೀನ ದೇವಾಲಯಗಳ ಮೇಲೆ ಉಗ್ರರ ಕರಿಛಾಯೆ ಬಿದ್ದದೆ. ಈ ಹಿನ್ನೆಲೆಯಲ್ಲಿ ಹಾಸನದ ಬೇಲೂರು, ಹಳೇ ಬೀಡಿನ, ಚನ್ನಕೇಶವ ಮತ್ತು ಹೊಯ್ಸಳೇಶ್ವರ ದೇವಾಲಯಗಳಿಗೆ ಸೆಕ್ಯೂರಿಟಿ ಹೆಚ್ಚಿಸುವಂತೆ ಗುಪ್ತಚರ ಇಲಾಖೆ ಸೂಚಿಸಿದೆ.
 
 
ಪಾಕಿಸ್ತಾನದ ಉಗ್ರ ಸಂಘಟನೆಯೊಂದು ಚನ್ನಕೇಶವ ಮತ್ತು ಹೊಯ್ಸಳೇಶ್ವರ ದೇವಾಲಯಗಳ ಮೇಲೆ ಕಣ್ಣಿಟ್ಟಿವೆ ಎಂದು ಕಳೆದ 15 ದಿನಗಳ ಹಿಂದೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ  ಪ್ರಾಚ್ಯ ಸಂಶೋಧನಾ ಇಲಾಖೆ ಮತ್ತು ದೇವಾಲಯ ಅಭಿವೃದ್ಧಿ ಸಮಿತಿಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಗುಪ್ತಚರ ಇಲಾಖೆ ಸೂಚಿಸಿದೆ.
 
ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತರನ್ನು ಪರಿಶೀಲಿಸಿ, ಯಾವುದೇ ಲೋಹದ ವಸ್ತುಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗುತ್ತಿದೆ. ದೇವಾಲಯದ ಸುತ್ತಮುತ್ತ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ದೇವಾಲಯದ ಸುತ್ತ ಸುಮಾರು 25 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
 
 
 
ಇನ್ನೂ ಹೋಟೆಲ್ ಹಾಗೂ ಅತಿಥಿ ಗೃಹಗಳಿಗೆ ಬರುವ ಪ್ರವಾಸಿಗರ ಗುರುತಿನ ಚೀಟಿ ಪರಿಶೀಲನೆ ಮಾಡುವಂತೆ ಹೋಟೆಲ್ ಮಾಲೀಕರುಗಳಿಗೆ ಸೂಚಿಸಲಾಗಿದೆ. ಜೊತೆಗೆ ಹೋಟೆಲ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅನುಮಾನ ಬಂದರೇ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here