ಉಗ್ರರ ಬಳಿ ಹೊಸ ನೋಟು ಪತ್ತೆ!

0
267

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಹೊಸ ನೋಟು ಭಯೋತ್ಪಾದಕರ ಕೈ ಸೇರಿದೆ. ಹೌದು ಬಂಡೀಪೋರ್ ನಲ್ಲಿ ಹೊಡೆದುರುಳಿಸಿದ ಉಗ್ರಗಾಮಿಗಳ ಬಳಿ ಭಾರತೀಯ ಸೇನೆಗೆ 2 ಸಾವಿರ ರುಪಾಯಿಯ ಹೊಸ ನೋಟುಗಳು ದೊರೆತಿವೆ.
 
 
ಹೊಸ ನೋಟಿನ ಜತೆಗೆ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು ಮತ್ತು ಎಕೆ-47 ಸಹ ದೊರೆತಿವೆ. ಕಾರ್ಯಾಚರಣೆ ನಂತರ ನಡೆದ ಶೋಧ ಕಾರ್ಯದಲ್ಲಿ ನೂರು ರೂಪಾಯಿಯ ಕೆಲವು ನೋಟುಗಳು ಸಹ ಸಿಕ್ಕಿವೆ. ಬಂಡೀಪೋರ್ ನ ಹಂಜಾನ್ ಹಳ್ಳಿಯ ಜನವಸತಿ ಪ್ರದೇಶದಲ್ಲಿ ಸೇನೆಯು ಉಗ್ರಗಾಮಿಗಳ ಎನ್ ಕೌಂಟರ್ ಮಾಡಿತ್ತು. ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರಗಾಮಿಗಳನ್ನು ಕೊಲ್ಲಲಾಯಿತು

LEAVE A REPLY

Please enter your comment!
Please enter your name here