ಉಗ್ರರ ಪಟ್ಟಿಗೆ ಮಸೂದ್ ಸೇರ್ಪಡೆಗೆ ಬೆಂಬಲ

0
277

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಸಂಸತ್ ಭವನದ ಮೇಲಿನ ದಾಳಿ ಕೋರ ಹಾಗೂ ಪಠಾಣ್ ಕೋಟ್ ದಾಳಿ ರೂವಾರಿ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮೂರು ಪ್ರಮುಖ ರಾಷ್ಟ್ರಗಳು ಬೆಂಬಲ ನೀಡಿವೆ.
 
 
 
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಸಾಥ್ ನೀಡಿದೆ.
 
ಆದರೆ ಕಳೆದ ಬಾರಿ ಭಾರತದ ಇದೇ ಪ್ರಯತ್ನಕ್ಕೆ ತಾಂತ್ರಿಕ ನೆಪವೊಡ್ಡಿ ಅಡ್ಡಿಯಾಗಿದ್ದ ಚೀನಾ ಈ ಬಾರಿಯೂ ಭಾರತಕ್ಕೆ ಅಡ್ಡಿಯಾಗಿದ್ದು, ಜಾಗತಿಕ ಘೋಷಿತ ಭಯೋತ್ಪಾದಕರ ಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸಲು ಸೂಕ್ತವಾದ ಅಂಶಗಳನ್ನು ಭಾರತ ನೀಡಿಲ್ಲ ಎಂದು ಮೊಂಡುವಾದವನ್ನು ಮಂಡಿಸಿದೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here