ಉಗ್ರರ ಗಡಿನುಸುಳುವಿಕೆ ಯತ್ನ ವಿಫಲ

0
160

ರಾಷ್ಟ್ರೀಯ ಪ್ರತಿನಿಧಿ ವರದಿ
ಗುರುದಾಸಪುರದಲ್ಲಿ ಉಗ್ರರ ಗಡಿನುಸುಳುವಿಕೆ ಯತ್ನ ವಿಫಲವಾಗಿದೆ. ಪಂಜಾಬ್ ರಾಜ್ಯದ ಗುರುದಾಸಪುರದ ಗಡಿಭಾಗದದಲ್ಲಿ ಗಡಿನುಸುಳುತ್ತಿದ್ದ ಉಗ್ರರ ಯತ್ನವನ್ನು ಬಿಎಸ್ ಎಫ್ ಯೋಧರು ವಿಫಲಗೊಳಿಸಿದ್ದಾರೆ.
 
 
 
ಬಿಎಸ್ ಎಫ್ ಯೋಧರ ಗುಂಡಿಗೆ ಹೆದರಿ ಪರಾರಿಯಾಗಿದ್ದಾರೆ. ಬಿಎಸ್ ಎಫ್ ನೆಲೆಯ ಮೇಲೆ ದಾಳಿಗೆ ಉಗ್ರರು ಸಂಚು ರೂಪಸಿದ್ದರು. ಸೈನಿಕರಿಂದ ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
 
 
 
ಕಣಿವೆ ರಾಜ್ಯದಲ್ಲೂ ಮುಂದುವರಿದ ಗುಂಡಿನ ಸದ್ದು
ಗಡಿಯುದ್ದಕ್ಕೂ ಗುಂಡಿನ ಚಕಮಕಿ ಮುಂದುವರಿದಿದೆ. ಪಾಕ್ ನಿಂದ ಮತ್ತೆ ಕದನವಿರಾಮ ಉಲ್ಲಂಘನೆಯಾಗಿದೆ. ಜಮ್ಮು-ಕಾಶ್ಮೀರದ ಸಬ್ ಜಿಯಾನ್, ಮಂಡಿ ಸೆಕ್ಟರ್ ಗಳಲ್ಲಿ ಗುಂಡಿನ ದಾಳಿ ನಡೆದಿದೆ. ಉಗ್ರರ ಗಡಿನುಸುಳುವಿಕೆಗೆ ಅನುವಾಗಲು ಗುಂಡಿನ ದಾಳಿ ನಡೆದಿದೆ.
ಆದರೆ ಭಾರತೀಯ ಸೇನೆ ಪಾಕ್ ಗುಂಡಿನ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದೆ. ಈ ಮೂಲಕ ಯೋಧರು ಉಗ್ರರ ಒಳನುಸುಳುವಿಕೆಗೆ ಬ್ರೇಕ್ ಹಾಕಿದ್ದಾರೆ.
 
 
 
ಹುತಾತ್ಮ ಯೋಧನಿಗೆ ಅಂತಿಮ ಗೌರವ:
ಹುತಾತ್ಮ ಯೋಧ ನಿತಿನ್ ಕುಮಾರ್ ಗೆ ಸೇನೆ ಅಂತಿಮ ಗೌರವ ಸಲ್ಲಿಸಲಾಗಿದೆ. ನಿನ್ನೆ ಬಾರಾಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ನಿತಿನ್ ಕುಮಾರ್(24) ಹುತಾತ್ಮರಾಗಿದ್ದರು. ಹುತಾತ್ಮ ಯೋಧನಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here