ಈ ಶಾಸಕರಿಗೆ ಸಾಧ್ಯವಾಗಿದ್ದು ಇತರರಿಗೆ ಯಾಕಾಗುತ್ತಿಲ್ಲ??

0
1546
ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ರಸ್ತೆಗಳ ಉಳಿಸಲು ವಿಶೇಷ ಅಭಿಯಾನಕ್ಕೆ ಕರೆ ಕೊಟ್ಟ ಶಾಸಕ ಹರೀಶ್ ಪೂಂಜಾ !. ಹೌದು…ಈ ಶಾಸಕರ ಕಾರ್ಯವೈಖರಿ ನಿಜಕ್ಕೂ ಇತರರಿಗೆ ಮಾದರಿ. ತನ್ನ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳು ಉಳಿಯಬೇಕು ಎಂಬ ಕಾಳಜಿ ಇವರಿಗಿದೆ. ಇದೇ ಕಾರಣಕ್ಕೆ ಇವರೊಂದು ಹೊಸ ಯೋಜನೆ ಆರಂಭಿಸಿದ್ದಾರೆ.
ಅದೇನಪ್ಪಾ ಎಂದರೆ… ಬೆಳ್ತಂಗಡಿ ತಾಲೂಕಿನ ಜೆಸಿಬಿ ಓನರ್ಸ್ ಅಸೋಸಿಯೇಷನ್ ಮೀಟಿಂಗ್  ಕರೆದು ಎಲ್ಲ ಜೆಸಿಬಿ ಮಾಲಕರು ಒಂದು ದಿನ ಉಚಿತವಾಗಿ ರಸ್ತೆ ಚರಂಡಿಗಳ ದುರಸ್ತಿಯ ಕೆಲಸ ಮಾಡಿಸುವ ಮೂಲಕ ನಮ್ಮ ರಸ್ತೆಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.  ಸಭೆಯಲ್ಲಿದ್ದ ಎಲ್ಲ ಜೆಸಿಬಿ ಮಾಲಕರು ಶಾಸಕರ ಮನವಿಯನ್ನು ಒಪ್ಪಿಕೊಂಡು ಒಂದು ದಿನ ತಾಲೂಕಿನಾದ್ಯಂತ ಉಚಿತವಾಗಿ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೇಗಿದೆ ನೋಡಿ…ಸಾಧಿಸಿದರೆ ಏನನ್ನೂ ಮಾಡಬಹುದು ಎಂಬುದಕ್ಕೆ ಇದೇ ಅಲ್ಲವೇ ನಿದರ್ಶನ.

LEAVE A REPLY

Please enter your comment!
Please enter your name here