ಈ ವಾಸನೆ ನಿಮಗೆ ಬರುತ್ತಿಲ್ಲವೇ…?

0
626

 
ಪ್ರಾದೇಶಿಕ ಸುದ್ದಿ
ಐತಿಹಾಸಿಕ ನಗರಿ ಮೂಡಬಿದಿರೆ ವಾಸನೆ ನಗರಿಯಾಗಿ ಪರಿವರ್ತನೆಯಾಗುತ್ತಿದೆ. ಇದು ಅಕ್ಷರಶಃ ಸತ್ಯ. ಮೂಡಬಿದಿರೆಯ ಅತ್ಯಂತ ಪ್ರಸಿದ್ಧಿಯ ಸ್ಥಳ ಜೈನ ಪೇಟೆಗೆ ಸಂಪರ್ಕ ಕಲ್ಪಿಸುವ ಕಲ್ಸಂಕ ಪರಿಸರ ದುರ್ನಾಥದಿಂದ ಕೂಡಿದ್ದು ತೀವ್ರ ಮುಜುಗರವುಂಟುಮಾಡುತ್ತಿದೆ. ಮೂಡಬಿದಿರೆ ಹಳೆ ಪೊಲೀಸ್ ಠಾಣೆಯ ಅನತಿ ದೂರದಲ್ಲಿ (ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ)ಈ ಅವ್ಯವಸ್ಥೆಯಿದೆ. ಕಲ್ಸಂಕದ ಪರಿಸರದಲ್ಲಿರುವ ತೋಡೊಂದು ಕೊಳಚೆಯಿಂದಾವೃತಗೊಂಡು ಗಬ್ಬುನಾಥ ಬೀರುತ್ತಿದೆ.
 
vaarte dranaz1
ಈ ಭಾಗದಲ್ಲಿ ಖಾಸಗೀ ಕಾಲೇಜೊಂದರ ಹಾಸ್ಟೆಲ್ ಇದೆ. ಕೆಲವೊಂದು ಹೊಟೇಲ್ , ಕ್ಯಾಂಟೀನ್ ಗಳು ಈ ಭಾಗದಲ್ಲಿವೆ. ಇವೆಲ್ಲರ ತ್ಯಾಜ್ಯ-ಕೊಳಚೆ ನೀರು ಇದೇ ತೋಡಿಗೆ ಬಂದು ಬೀಳುತ್ತಿರುವುದೇ ಈ ಗಬ್ಬುನಾಥಕ್ಕೆ ಕಾರಣ.
 
vaarte dranaz0
ಶುಚಿತ್ವಕ್ಕೆ- ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಮೂಡಬಿದಿರೆ ಪುರಸಭೆ ಶೀಘ್ರ ಈ ಸಮಸ್ಯೆಗೆ ಪರಿಹಾರ ಮಾಡಿಕೊಡಬೇಕು. ಬೇಸಿಗೆಯ ಬೇಗೆಯಿಂದ ತೋಡಲ್ಲಿ ನೀರ ಹರಿವು ಸಂಪೂರ್ಣ ನಿಂತಿದ್ದು ಕೊಳಚೆ ಸಂಗ್ರಹವಾಗಿ ವಾಸನೆ ಮೂಡತೊಡಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನತೆಯಲ್ಲಿ ಆವರಿಸಿದೆ.ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆಯೊಂದಿಗೆ ಸಾರ್ವಜನಿಕರ ಸಹಭಾಗಿತ್ವವೂ ಇದ್ದರೆ ಮೂಡಬಿದಿರೆ ಸ್ವಚ್ಛನಗರಿಯಾಗುವುದರಲ್ಲಿ ಸಂದೇಹವೇ ಇಲ್ಲ.

LEAVE A REPLY

Please enter your comment!
Please enter your name here