ಈ ವಾರದ ಬೆಳ್ಳಿ ಸಿನಿಮಾ ’ಬೆಳ್ಳಿ ಕಿರಣಾ’

0
295

 
ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ ಬೆಳ್ಳಿಸಿನಿಮಾ ಬೆಳ್ಳಿಮಾತು ಕಾರ್ಯಕ್ರಮದಲ್ಲಿ ಜುಲೈ 16 ರ ಶನಿವಾರ ಸಂಜೆ 4-00 ಗಂಟೆಗೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬೆಳ್ಳಿ ಸಿನಿಮಾ ’ಬೆಳ್ಳಿ ಕಿರಣಾ’ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ತಿಳಿಸಿದ್ದಾರೆ.
 
 
ಅಂದು ’ಬೆಳ್ಳಿ ಕಿರಣಾ’ ಚಲನಚಿತ್ರ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ಕೆ. ಶಿವರುದ್ರಯ್ಯ ಅವರ ಬೆಳ್ಳಿಮಾತು ಸಂವಾದ ಏರ್ಪಡಿಸಲಾಗಿದೆ.
 
 
ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಎಸ್. ಜಿ. ಸಿದ್ದರಾಮಯ್ಯ, ಡಾ ಷರೀಫ್ ಸಿ, ನಿರ್ಮಾಪಕರಾದ ಎಂ. ಗುರುರಾಜ್ ಸೇಟ್ ಮತ್ತು ಎ. ಎಸ್. ವೆಂಕಟೇಶ್, ಲೇಖಕ ಬಿ. ಆರ್. ಲಕ್ಷ್ಮಣ ರಾವ್, ನಟ ದಿಲೀಪ್ ರಾಜ್ ಹಾಗೂ ನಟಿ ಅನುಶ್ರೀ ಪಾಲ್ಗೊಳ್ಳಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಸ್. ವಿ.ರಾಜೇಂದ್ರಸಿಂಗ್ ಬಾಬು ವಹಿಸುವರು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here