ಈ ಮುಖದಲ್ಲಿ ಮಂದಹಾಸ ಮೂಡಲು ನಿಮ್ಮ ಅವಶ್ಯಕತೆಯಿದೆ…

0
1244

ಮೂಡುಬಿದಿರೆ: ಹೌದು…ಬೆಟ್ಟದಂತಹ ಆಸೆಹೊತ್ತ ಪುಟ್ಟ ಕಣ್ಣುಗಳಲ್ಲಿ ಇಂದು ತೇವ ಮಾತ್ರ… ಆ ತೇವ ಭರಿತ ಕಣ್ಣುಗಳನ್ನು ಕಂಡ ಮನೆ ಹಿರಿಯರ ಕಣ್ಣುಗಳು ಸದಾ ಕಣ್ಣೀರು ಸುರಿಸುತ್ತಿವೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ. ಒಂದೆಡೆ ಕೊರೊನಾ … ದುಡಿದು ಸಂಪಾದಿಸುವ ಆಸೆ ಇಲ್ಲವೇ ಇಲ್ಲ…ಇತ್ತ ಬೆಳೆದು ನಿಂತ ಮಗನ ಇಂದಿನ ಸ್ಥಿತಿ ನೋಡಲಾರದೆ ಕಣ್ಣೀರಿಡುವ ಎರಡು ಹಿರಿ ಜೀವಿಗಳು…ಹೌದು…ದೇವರೇ ನಮಗ್ಯಾಕೆ ಈ ಸ್ತಿತಿ ಎಂದು ಹೆತ್ತ ಹೃದಯ ರೋಧಿಸುತ್ತಿದೆ… ಇದೇ ನೋಡಿ ಕರುಣಾಜನಕ ಕಥೆ…ಈ ಮನೆಯ ಹಿರಿಯ ಜೀವಿಗಳ ಮುಖದಲ್ಲಿ ನಗು ಅರಳಬೇಕೆಂದಿದ್ದರೆ ನಾವು ಕೈ ಜೋಡಿಸಲೇ ಬೇಕು…ನಮ್ಮೆಲ್ಲರ ಸಣ್ಣ ಸಣ್ಣ ಸಹಾಯಗಳು ಈ ಮನೆಯಲ್ಲಿ ಮತ್ತೆ ಸಂತಸ ಮೂಡಿಸುವಂತೆ ಮಾಡಬಲ್ಲದು…

ಹೌದು…ಇದೊಂದು ಪುಟ್ಟ ಕುಟುಂಬ…ಹೇಳುವಂತಹ ಆರ್ಥಿಕ ಹಿನ್ನಲೆ ಇವರಿಗಿಲ್ಲ. ಪುಟ್ಟ ಹಂಚಿನ ಮನೆ, ಮುಂಭಾಗದಲ್ಲಿ ನಾಲ್ಕಾರು ಅಡಿಕೆ ಗಿಡಗಳು. ಹೇಳುವ ಉತ್ಪತ್ತಿಯೇನೂ ಇಲ್ಲ. ದುಡಿದರೆ ಮಾತ್ರ ಕೈಗೆ ಕಾಸು…ಏನತ್ಮಧ್ಯೆ ಕುಟುಂಬದ ಭರವಸೆಯ ಕೊಂಡಿಗೆ ಅದ್ಯಾವ ಕೆಟ್ಟ ದೃಷ್ಠಿ ವಕ್ರಸಿತ್ತೋ ಗೊತ್ತಿಲ್ಲ… ಅದೊಂದು ಕೆಟ್ಟ ಘಳಿಗೆಯಲ್ಲಿ ಈ ಹುರಿಮೀಸೆಯ ಹುಡುಗ ತೆಂಗಿನ ಮರದಿಂದ ಕೆಳಗೆ ಬಿದ್ದ…ಬಿದ್ದ ರಭಸಕ್ಕೆ ಬೆನ್ನುಹುರಿಗೆ ಏಟಾಯಿತು…ಚಿಕಿತ್ಸೆಗಾಗಿ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು…
ಸುಶಾಂತ್‌ ಪೂಜಾರಿ ಹದಿನೇಳು ವರುಷದ ಯುವಕ. ದ್ವಿತೀಯ ಪಿ.ಯು ಕಲಿಯುವ ವಿದ್ಯಾರ್ಥಿ. ಮಾರ್ಚ್‌ ೩೦ರಂದು ತನ್ನ ಸಮಸ್ಯೆಗಾಗಿ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದಾನೆ. ಕ್ಲಿಷ್ಟಕರ ಸರ್ಜರಿಯೂ ನಡೆದಿದೆ. ಮೂರು ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಮೊದಲಿನಂತಾಗಲು ಇನ್ನೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ.ಈತ ಮೊದಲಿನಂತಾಗಲು ಇನ್ನೂ ಸುಮಾರು ನಾಲ್ಕಾರು ತಿಂಗಳುಗಳ ಕಾಲ ಬೇಕೆಂದು ವೈದ್ಯರು ಹೇಳುತ್ತಾರಂತೆ. ಹೀಗಾಗಿ ಈ ಯುವಕನ ಭವಿಷ್ಯಕ್ಕೆ ಸ್ಪಂದಿಸುವುದು ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯ. ನಾವು ಹೃದಯ ವೈಶಾಲ್ಯತೆ ಮೆರೆಯೋಣ…ಈತನ ಕಷ್ಟಕ್ಕೆ ಸ್ಪಂದಿಸೋಣ…
ದಾನಿಗಳು ತಮ್ಮ ಉದಾರ ಧನ ಸಹಾಯವನ್ನು ಸುಶಾಂತ್‌ ಪೂಜಾರಿಯವರ ತಾಯಿ ಸುಲೋಚನ ಅವರ ಸಿಂಡಿಕೇಟ್‌ ಬ್ಯಾಂಕ್‌ ಮೂಡುಬಿದಿರೆ ಶಾಖೆಯ ಖಾತೆಗೆ ದಾನಮಾಡಬಹುದು.

ಹೆಸರು: ಸುಲೋಚನ, ಬ್ಯಾಂಕ್‌ : ಸಿಂಡಿಕೇಟ್‌ ಬ್ಯಾಂಕ್‌ ಮೂಡುಬಿದಿರೆ ಬ್ರಾಂಚ್‌ : ಖಾತೆ ಸಂಖ್ಯೆ: O1282200141437,
ಐ.ಎಫ್.ಎಸ್.ಸಿ.ಕೋಡ್:‌ ಎಸ್.ವೈ.ಎನ್.ಬಿ.
0000128

LEAVE A REPLY

Please enter your comment!
Please enter your name here