ಈ ಭಯಾನಕ ಸತ್ಯದ ಬಗ್ಗೆ ನೀವು ಓದಲೇ ಬೇಕು…

0
1800

ವಿಶೇಷ ವರದಿ: ನಾಡೋಡಿ

ಹೌದು ಲೋಕದಲ್ಲಿ ಈ ಬಾರಿ ಭಯಾನಕ ಸಂಗತಿಗಳು ಸಂಭವಿಸಲಿದೆಯಂತೆ… ಲೋಕದಲ್ಲಿ ಅಲ್ಲೋಲ ಕಲ್ಲೋಲ ಏರ್ಪಡಲಿದೆಯಂತೆ… ಕಳೆದ ವರ್ಷದ ಮಳೆಗಾಲದಲ್ಲಿ ನೆರೆಯ ಕೊಡಗು ಜಿಲ್ಲೆ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಊಹೆಗೂ ನಿಲುಕದ ರೀತಿಯ ಭೀಕರ ಸಂಗತಿಗಳು ಸಂಭವಿಸಿದ್ದು ಇನ್ನೂ ಜನತೆಯ ಮನದಿಂದ ಮರೆಯಾಗಿಲ್ಲ. ಮತ್ತೆ ಈ ವರ್ಷ ಮಳೆಗಾಲ ಆರಂಭಗೊಂಡಿದೆ. ಈ ಬಾರಿಯ ಮಳೆಗಾಲ ಇನ್ನೂ ಭೀಕರ ಭೀಬತ್ಸವಾದಂತಹ ಸಂಗತಿಗಳನ್ನು ಹೊತ್ತು ತರುತ್ತಿದೆಯೇ ಎಂಬ ಭಯಾನಕ ಅಂಶ ಇದೀಗ ಕಾಡತೊಡಗಿದೆ. ಇದು ಹೌದು… ಎಂಬಂತಹ ಮುನ್ಸೂಚನೆ ಈಗಾಗಲೇ ಲಭಿಸಿದೆ. ಇಡೀ ರಾಜ್ಯದ ಜನತೆ ಕಳೆದೊಂದು ವರುಷಗಳಿಂದ ಅನುಭವಿಸುತ್ತಿರುವ ಭಯಾನಕ ಸತ್ಯ.

ಹೌದು ಬರಪೂರ ಕಳೆದ ವರುಷ ಮಳೆಯಾದರೂ ಈ ವರ್ಷ ಜನವರಿಯಾರಂಭದಲ್ಲೇ ಜನತೆ ನೀರಿನ ಅಭಾವವನ್ನು ಅನುಭವಿಸಿದ್ದಾರೆ. ಎಲ್ಲಿ ನೋಡಿದರಲ್ಲಿ ನೀರಿನ ಅಭಾವ ಕಾಡತೊಡಗಿತ್ತು. ಫೆಬ್ರವರಿ ಮಾರ್ಚ್‌ ಎಪ್ರಿಲ್‌ ಈ ಮೂರು ತಿಂಗಳಂತೂ ನೀರಿಲ್ಲದೆ ಜನತೆ ಕಂಗಾಲಾಗುವಂತೆ ಮಾಡಿತು. ಅಷ್ಟೇ ಏಕೆ ಮೇ ತಿಂಗಳಲ್ಲಿ ಕುಡಿಯು ನೀರಿನ ಅಭಾವವೂ ಆಗಿ ʻನಾವೇ ನಮ್ಮ ಅಂತ್ಯಕ್ಕೆ ಕಾರಣವಾಗಿದ್ದೇವೆʼ ಎಂಬ ಮಾರ್ಮಿಕ ಅಂಶವನ್ನು ಜನತೆಗೆ ಅರಿವಾಗುವಂತೆ ಪರಿಸರ ಮಾಡಿದ್ದಂತೂ ಸತ್ಯ. ಜೂನ್‌ ೧೦ರ ತನಕವೂ ಮುಂಗಾರು ಮಳೆಯಿಲ್ಲದೆ ಹನಿ ನೀರಿಗೂ ತತ್ವಾರ ಎಂಬಂತಹ ಪರಿಸ್ಥಿತಿ ಪರಿಸರದಲ್ಲಿ ತಂದೊಡ್ಡಿತ್ತು. ಇದೆಲ್ಲವೂ ಮಾನವನ ಅನಾಹುತಗಳಿಂದಲೇ ಸಂಭವಿಸಿದ ದೊಡ್ಡ ದುರಂತ…

ಈಗ ನಾವು ಹೇಳಹೊರಟಿರುವುದು ಇನ್ನೂ ಭಯಾನಕ ಭಯಂಕರ ಸಂಗತಿ!

 

Advertisement

ಪೂರ್ವದಿಕ್ಕಿನಿಂದ ಉದ್ಭವಿಸುವ ದ್ರೋಣ ಹೆಸರಿನ ಮೇಘವು ನಾಲ್ಕು ಕೊಳಗ ಪ್ರಮಾಣದಷ್ಟು ಮಳೆ ಸುರಿಸುವುದು. ನಿರಂತರಂ ಮಹಾವರ್ಷಂ  ದ್ರೋಣೇವೃಷ್ಟಿರನೇಕಧಾ ನಿರಂತರವಾಗಿ ಭಾರೀ ಪ್ರಮಾಣದ ಮಳೆಯುಂಟಾಗುವುದೆಂಬ ಮೇಘ ಫಲ ಕಳೆದ ವರ್ಷ ಸರಿಯಾಗಿದೆ. ವಿಲಂಬಿ ನಾಮ ಸಂವತ್ಸರದ ಮೇಘ ಫಲ ಅದಾಗಿತ್ತು. ಅಷ್ಟೇ ಅಲ್ಲ…ಮಧ್ಯಪ್ರದೇಶದಲ್ಲಿ ಅತಿವೃಷ್ಟಿಯಿಂದ ಜಲ ವಿಕೋಪವುಂಟಾಗುವುದು. ಲೋಕದಲ್ಲೆಡೆ ಜಲಸಂಬಂಧವಾಗಿ ಅಶುಭ ಉಂಟಾಗುವುದು ಎಂಬ ಫಲವನ್ನು ನೀಡಿತ್ತು. ಇದು ಅಕ್ಷರಶಃ ಸರಿಯಾಗಿದೆ. ಜಲ ಸಂಬಂಧದ ತೊಂದರೆಗಳು ಜನತೆಯ ನಿದ್ದೆಗೆಡಿಸುವಂತೆ ಮಾಡಿದೆ. ಮೇಘಫಲವು ಅಕ್ಷರಶಃ ಸತ್ಯವಾಗಿ ಹೋಗಿದೆ.

 

ವಿಕಾರಿ ಸಂವತ್ಸರದ ಪ್ರಸ್ತುತ ವರ್ಷದಲ್ಲಿ ಈಶಾನ್ಯ ದಿಕ್ಕಿನಿಂದ ಉದ್ಭವಿಸುವ ʻಪುಷ್ಕರ ಎಂಬ ಹೆಸರಿನ ಮೇಘ ಸಮೂಹವು ಒಂದು ಕೊಳಗ ಪ್ರಮಾಣದಷ್ಟು ಮಳೆ ಸುರಿಸುವುದುʼ ಎಂದು ಮೇಘಫಲ ತಿಳಿಸಿದೆ. ಈ ಪ್ರಕಾರದಲ್ಲಿ ಈ ಬಾರಿಯೂ ಉತ್ತಮ ಮಳೆಯಾಗಬೇಕಾಗಿದೆ. ಯತೇಚ್ಛವಾದ ಜಲ ಪರಿಸರಕ್ಕೆ ಲಭ್ಯವಾಗಲಿದೆ. ಆದರೆ ಫಲ ಇಷ್ಟಕ್ಕೆ ಮುಗಿದಿಲ್ಲ. ಭಾರೀ ಗಾಳಿಯಿಂದ ಕೂಡಿದ ಸಾಮಾನ್ಯ ಮಳೆಯೆಂಬ ಫಲವೂ ಇದೆ.  ಸಸ್ಯಗಳು ಬಹಳ ವಿರಳವಾಗಿ ಬೆಳೆಯಲಿವೆ ಎಂಬ ಆಘಾತಕಾರಿ ಅಂಶವೂ ಇವೆ. ಗಾಳಿಯ ರಭಸಕ್ಕೆ ಬಹುತೇಕ ತರುಲತಾದಿಗಳು, ವೃಕ್ಷಮೂಲಗಳು ಹಾನಿಗೊಳಗಾಗಲಿವೆ. ಗಡ್ಡೆ ಗೆಣಸು, ಫಲಮೂಲಗಳು ನಾಶಹೊಂದಲವಿವೆ ಎಂಬ ಅಂಶವನ್ನೂ ಫಲ ಹೇಳಿದೆ. ಅದು ಸತ್ಯವಾಗುತ್ತಿದೆ. ಈಗಾಗಲೇ ಭೀಕರ ಗಾಳಿಗೆ ಹಲವು ಕಡೆಗಳಲ್ಲಿ ನಾಶವಾದ ಉದಾಹರಣೆ ನಮ್ಮ ಮುಂದೆಯೇ ಇದೆ. ಇನ್ನೂ ಒಂದು ಅಂಶವನ್ನು ಮೇಘ ಫಲದಲ್ಲಿ ಹೇಳಿದೆ. ಮಳೆಯು ಕಡಿಮೆಯಾದುದರಿಂದ ನೀರಿನ ಅಭಾವವೊದಗುವುದು ಎಂಬ ಅಂಶ ಫಲದಲ್ಲಿ ಹೇಳಿದೆ. ಲೋಕದಲ್ಲಿ ನಾನಾ ವಿಧದ ಪಾತಕಗಳು ವೃದ್ಧಿಹೊಂದುವವು. ಜನರು ವಿವಿಧ ರೋಗಗಳಿಂದ ಪೀಡಿತರಾಗಿ ಬಹಳ ದುರ್ಬಲಗೊಳ್ಳುವರು ಎಂಬ ಅಂಶವು ಮೇಘಫಲದಲ್ಲಿ ಸ್ಪಷ್ಟವಾಗಿದೆ. ಈ ಫಲವೇ ಇಂದು ಅನೇಕ ಆತಂಕಕ್ಕೆ ಕಾರಣವಾಗಿದೆ. ಕಳೆದ ಬಾರಿಯ ಮೇಘಫಲ ನಿಜವಾಗಿದ್ದು ಈ ಬಾರಿಯ ಮೇಘಫಲವೂ ನಿಜವಾದದ್ದೇ ಆದಲ್ಲಿ ಮುಂದೆ ದೊಡ್ಡ ಆಘಾತ ನಮ್ಮೆದುರಿಗಿದೆ ಎಂಬ ಸತ್ಯವನ್ನು ಅರಿಯಲೇ ಬೇಕು.

 

LEAVE A REPLY

Please enter your comment!
Please enter your name here