ಈ ಬಾಲೆಗೆ ಸಹಾಯ ಮಾಡೋದೇ ಖುಷಿಯಂತೆ!

0
242
ಈ ಬಾಲೆಗೆ ಸಹಾಯ ಮಾಡೋದೇ ಖುಷಿಯಂತೆ!…ಹೌದು ಇದೊಂದು ಅಪರೂಪದ ಘಟನೆ. ಎಳೆವಯಸ್ಸಿನಲ್ಲಿ ತನ್ನ ಸಹಪಾಠಿಗಳೊಂದಿಗೆ , ಗೆಳೆಯ ಗೆಳತಿಯರೊಂದಿಗೆ ಹರೆಟೆಹೊಡೆಯುತ್ತಾ ಆಡುತ್ತಾ ಇರುವ ಮಂದಿಯೇ ಹೆಚ್ಚು. ಆದರೆ ಈಕೆ ಇವರೆಲ್ಲರಿಗಿಂತ ಭಿನ್ನ…ವಿಭಿನ್ನ…ತನ್ನಿಂದ ಏನಾದರೊಂದು ಸಹಾಯ ಇತರರಿಗೆ ಆಗಬೇಕೆಂಬ ಹಂಬಲ… ಈ ಕಾರಣಕ್ಕಾಗಿಯೇ `ಆರದಿರಲಿ ಬದುಕು ಆರಾಧನಾ ತಂಡ’ ಎಂಬ ವಾಟ್ಸ್ ಆಪ್ ಗ್ರೂಪ್ ರಚಿಸಿ ಆ ಮೂಲಕ ಅಶಕ್ತರಿಗೆ ಸಹಾಯ ನೀಡುತ್ತಾ ಬರುತ್ತಿದ್ದಾಳೆ ಮಜಾ ಭಾರತ ಖ್ಯಾತಿಯ ಬಾಲ ಪ್ರತಿಭೆ ಆರಾಧನಾ ಭಟ್ ನಿಡ್ಡೋಡಿ.
ವಾಮಂಜೂರಿನ ಮಂದಾರ ದ ಡಂಪಿಂಗ್ ಯಾರ್ಡ ನಿಂದ ಮನೆ ಕಳೆದು ಕೊಂಡ  ಸಂತ್ರಸ್ತರಿಗೆ ಆರದಿರಲಿ ಬದುಕು  ಆರಾಧನಾ ತಂಡ ದವರು ಕಾಣದ ಕಡಲಿಗೆ ಹಂಬಲಿಸಿದೆ ಮನ ತಂಡದಿಂದ 12,500 ಮೌಲ್ಯದ  ದಿನಸಿ ಸಾಮಾಗ್ರಿ ಪರಿಹಾರ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ಮಂದಾರ ರಾಜೇಶ್ ಭಟ್ ಹಾಗು ಆರದಿರಲಿ ಬದುಕು ಆರಾಧನಾ ಸಂಸ್ಥೆ ಯ ಸದಸ್ಯರಾದ  ಆರಾಧನಾ ಭಟ್ , ಅಭಿಷೇಕ್ ಶೆಟ್ಟಿ ಐಕಳ,ವಿವೇಕ್ ಪ್ರಭು ,ಗುರುರಾಜ್ ಅಂಕೋಲಾ ರಾಕೇಶ್ ಪೊಳಲಿ,ಪದ್ಮಶ್ರೀ ಭಟ್,ತುಳು ವರ್ಲ್ಡ್ ಮುಖ್ಯ ಸ್ಥ ಡಾ.ರಾಜೇಶ್ ಆಳ್ವ ಮಂದಾರ ಸಂತ್ರಸ್ತರು ಉಪಸ್ಥಿತಿತರಿದ್ದರು.

LEAVE A REPLY

Please enter your comment!
Please enter your name here