ಈ ದಿಟ್ಟ ಹೆಜ್ಜೆಗೆ ಎಲ್ಲರೂ ಚಪ್ಪಾಳೆ ತಟ್ಟಲೇ ಬೇಕು…ಏಕೆಂದರೆ…

0
574

ಮೂಡುಬಿದಿರೆ: ಹೌದು ಈ ದಿಟ್ಟ ಹೆಜ್ಜೆಗೆ ಎಲ್ಲರೂ ಚಪ್ಪಾಳೆ ತಟ್ಟಲೇ ಬೇಕು…ಏಕೆಂದರೆ ಆಳುವ ವರ್ಗವೊಂದು ಮಾಡಬೇಕಾದ ಕಾರ್ಯವನ್ನು ಸಂಘಟನೆಯೊಂದು ಮಾಡಿ ತೋರಿಸುತ್ತಿದೆ. ಮೂಡುಬಿದಿರೆಯಲ್ಲಿ ಮಣ್ಣಿನ ಮಗಳ ಸ್ಮರಣೆ ಮಾಡುವ ಜೊತೆಗೆ ಆಕೆಯ ಹೆಸರಿನಲ್ಲಿ ಉದ್ಯಾನವನವೊಂದನ್ನು ಮಾದರೀಯಾಗಿ ಮಾಡಿ ತೋರಿಸಿದೆ ಮೂಡುಬಿದಿರೆಯ ಜವನೆರ್‌ ಬೆದ್ರ ಸಂಘಟನೆ. ಅದೂ ಐತಿಹಾಸಿಕ ಚೌಟರ ಅರಮನೆಯ ಇತಿಹಾಸ ಪ್ರಸಿದ್ಧಿಯ ಅರಮನೆ ಮೈದಾನದಲ್ಲಿ ಎಂದರೆ ಅಚ್ಚರಿಯಾಗದಿರದು… ಎಂದೋ ಆಗಬೇಕಾಗಿದ್ದ ಕಾರ್ಯವನ್ನು ಮೂಡುಬಿದಿರೆಯ ಜವನೆರ್‌ ಬೆದ್ರ ಸಂಘಟನೆ ಇದೀಗ ಮಾಡಿ ತೋರಿಸಿದೆ. ಇನ್ನಾದರೂ ಸ್ಥಳೀಯಾಡಳಿತಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಮೂಡುಬಿದಿರೆಯಲ್ಲಿ ಇನ್ನಷ್ಟು ಉದ್ಯಾನವನಗಳು ನಿರ್ಮಾಣವಾಗಬೇಕಾಗಿದೆ. ರಾಣಿ ಅಬ್ಬಕ್ಕನ ಹೆಸರಿನಲ್ಲಿ ಇನ್ನಷ್ಟುಕಾರ್ಯಗಳು ನಡೆಯಬೇಕಾಗಿವೆ. ಅಳಿದುಳಿದ ಮೂಡುಬಿದಿರೆಯ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಡಿಯಿಡಬೇಕಾಗಿದೆ.

ಚೌಟ ರಾಣಿ ಅಬ್ಬಕ್ಕ ಕಿರು ಉದ್ಯಾನವನ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಡಿಯಲ್ಲಿ ಐತಿಹಾಸಿಕ ನಗರಿ ಮೂಡುಬಿದಿರೆ ಸ್ವಚ್ಛ ಸುಂದರವಾಗಬೇಕು ಎಂಬ ಕಲ್ಪನೆಯೊಂದಿಗೆ ಜವನೆರ್ ಬೆದ್ರ ಸಂಘಟನೆ ಕಳೆದ 103 ವಾರಗಳಿಂದ ಕ್ಲೀನಪ್ ಮೂಡುಬಿದ್ರೆ ಸ್ವಚ್ಛತಾ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು ಇತ್ತೀಚೆಗೆ ನೂರನೇ ವಾರದ ಸ್ವಚ್ಛತಾ ಕಾರ್ಯದ ಪ್ರಯುಕ್ತ ಬೃಹತ್‌ ಜನಜಾಗೃತೀ ಜಾಥಾ ನಡೆಸುವ ಮೂಲಕ ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ನೂರನೇ ಸ್ವಚ್ಛತಾ ಕಾರ್ಯಕ್ರಮದಲ್ಲಿ ಈ ಸಂಘಟನೆಯ ಸದಸ್ಯರು ದಿಟ್ಟ ನಿರ್ಧಾರವೊಂದನ್ನು ಮಾಡಿದ್ದು ಮೂಡುಬಿದಿರೆಯನ್ನು ಶತಾಯ ಗತಾಯ ಸ್ವಚ್ಛಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ. ಅದರಂತೆ ಮೂಡುಬಿದಿರೆಯಲ್ಲಿ ಇದೀಗ ಕಿರು ಉದ್ಯಾನವನವೊಂದು ತಲೆಯೆತ್ತಿದೆ. ಇದೇ 23ರಂದು ಇದರ ಉದ್ಘಾಟನೆಯೂ ನಡೆಯಲಿದೆ. ಇಲ್ಲಿ ಸುಂದರ ಅಬ್ಬಕ್ಕ ಪುತ್ಥಳಿ ಸ್ಥಾಪನೆಗೊಂಡಿದ್ದು ಅರಮನೆಯ ಕಳೆಯನ್ನು ಹೆಚ್ಚಿಸುವಂತೆ ಮಾಡಿದೆ.

LEAVE A REPLY

Please enter your comment!
Please enter your name here