ಈ ತಿಂಗಳಲ್ಲೇ 'ಫ್ರೀಡಂ 251' ಗ್ರಾಹಕರ ಕೈಗೆ

0
252

ರಾಷ್ಟ್ರೀಯ ಪ್ರತಿನಿಧಿ ವರದಿ
ಎಲ್ಲರ ನಿರೀಕ್ಷೆಯ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಈ ತಿಂಗಳಲ್ಲೇ ಗ್ರಾಹಕರಿಗೆ ತಲುಪಲಿದೆ. ಜೂನ್ 28ರಿಂದ ‘ಫ್ರೀಡಂ 251’ 3ಜಿ ಮೊಬೈಲ್ ಗಳ ವಿತರಣೆಯಾಗಲಿದೆ.
 
 
ಈ ಬಗ್ಗೆ ನವದೆಹಲಿಯಲ್ಲಿ ರಿಂಗಿಂಗ್ ಬೆಲ್ಸ್ ಕಂಪನಿ ನಿರ್ದೇಶಕ ಮೋಹಿತ್ ಗೋಯೆಲ್ ಮಾಹಿತಿ ನೀಡಿದ್ದಾರೆ. ಈ ಕಂಪನಿ ಗ್ರಾಹಕರಿಗೆ 251 ರೂ.ಗೆ ಮೊಬೈಲ್ ನೀಡುವುದಾಗಿ ಹೇಳಿದ್ದರು. ಅಂತೆಯೇ ನೊಂದಾಯಿತ 30,000 ಗ್ರಾಹಕರಿಗೆ ಸ್ಮಾರ್ಟ್ ಫೋನ್ ಗಳ ವಿತರಣೆಯಾಗಲಿದೆ.
 
 
ಈ ಮೊದಲು ಕಂಪನಿಯ ನಿರ್ದೇಶಕರು ಜೂನ್ 30ಕ್ಕೆ ಮೊಬೈಲ್ ವಿತರಣೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಈಗ ‘ಫ್ರೀಡಂ 251’ ಮೊಬೈಲ್ ಎರಡು ದಿನದ ಮೊದಲೇ ಗ್ರಾಹಕರ ಕೈಸೇರಲಿದೆ.

LEAVE A REPLY

Please enter your comment!
Please enter your name here