ಈ ಜನಗಳಿಗೆ ಬುದ್ದಿ ಹೇಳೋರು ರ್ಯಾರು…? ಅಧಿಕಾರಿಗಳೇ ನೀವೇನ್‌ ಮಾಡ್ತಿದ್ದೀರಿ…?

0
864

ಈ ಜನಗಳಿಗೆ ಬುದ್ದಿ ಹೇಳೋರು ರ್ಯಾರು…? ಅಧಿಕಾರಿಗಳೇ ನೀವೇನ್‌ ಮಾಡ್ತಿದ್ದೀರಿ…? ಈ ಪ್ರಶ್ನೆ ಅನಿವಾರ್ಯವಾಗಿ ಕೇಳೋ ಪರಿಸ್ಥಿತಿ ಇಂದು ಎದುರಾಗಿದೆ. ಕಾರಣವಿಷ್ಟೇ…ಮೂಡುಬಿದಿರೆಯ ʻರಿಂಗ್‌ ರೋಡ್‌ʼನಲ್ಲೊಮ್ಮೆ ನೀವು ಸಂಚರಿಸಿದರೆ ಸಾಕು…ಅಲ್ಲಿ ಸತ್ತ ನಾಯಿ, ಬೆಕ್ಕು, ಪ್ರಾಣಿಗಳು ರಸ್ತೆ ಬದಿಗಳಲ್ಲಿ , ಗೋಣಿ ಚೀಲದೊಳಗೆ ಸಿಗುತ್ತವೆ…ರಸ್ತೆಯಂಚಿನಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಕಂಡು ಬರುತ್ತವೆ… ! ಇದನ್ನು ಎಸೆಯೋ ಜನರ ಮನಸ್ಥಿತಿ ಹೇಗಿರಬೇಕು… ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಗಲೀಜು ಮಾಡುವ ವ್ಯಕ್ತಿಗಳ ಮನೋಧರ್ಮ ಹೇಗಿರಬೇಡ ಅಲ್ಲವೇ? … ಮೂಡುಬಿದಿರೆಯ ಪುರಸಭೆ ಅನೇಕ ಉತ್ತಮ ಕಾರ್ಯ ಮಾಡುತ್ತಿದೆ. ಆದರೂ ಜನತೆಗೆ ಬುದ್ದಿ ಇಲ್ಲದಿದ್ದರೆ ಏನು ಮಾಡುವುದು ಅಲ್ಲವೇ? ಅಧಿಕಾರಿಗಳು ರಾತ್ರಿ ಹಗಲು ಕಾವಲು ಕಾಯಲು ಸಾಧ್ಯವೇ? ಆದರೂ ಇಲ್ಲಿ ಕಸ ಎಸೆಯುವ ಮಂದಿಯನ್ನು ಹುಡುಕಿ ಶಿಕ್ಷಿಸುವ ಕಾರ್ಯ ಆದರೆ ಇನ್ನಾದರೂ ಸ್ವಚ್ಛತೆ ಮೂಡಲು ಸಾಧ್ಯವಿದೆ.
ಇವರ ಬೆನ್ನು ತಟ್ಟೋಣ… : ಪ್ರತೀ ಭಾನುವಾರ ಬೆಳ್ಳಂ ಬೆಳಗ್ಗೆ ಮೂಡುಬಿದಿರೆಯ ಜವನೆರ್‌ ಬೆದ್ರ ಸಂಘಟನೆ ಕ್ಲೀನ್‌ ಅಪ್‌ ಮೂಡುಬಿದಿರೆ ಎಂಬ ಸ್ವಚ್ಛತಾ ಅಭಿಯಾನವನ್ನು ಮಾಡುತ್ತಾ ಬರುತ್ತಿದೆ. ಕಳೆದ 107ವಾರಗಳಿಂದ ನಿರಂತರವಾಗಿ ಈ ಕಾರ್ಯ ನಡೆಯುತ್ತಿದೆ. ಈ ಅಭಿಯಾನದಂಗವಾಗಿ ಭಾನುವಾರ ಮೂಡುಬಿದಿರೆಯ ರಿಂಗ್‌ ರೋಡ್‌ ನಲ್ಲಿ ಸ್ವಚ್ಛತಾ ಕಾರ್ಯ ನಡೆದಾಗ ಅಲ್ಲಿ ತ್ಯಾಜ್ಯ, ಪ್ಲಾಸ್ಟಿಕ್‌, ಕೊಳೆತ ಸ್ಥಿತಿಯಲ್ಲಿ ಪ್ರಾಣಿಗಳ ಕಳೇಬರಗಳನ್ನು ಕಂಡು ದಂಗಾಗುವಂತಾಯಿತು. ಖಾಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ದೊರೆತವು… ಎಲ್ಲೆಂದರಲ್ಲಿ ತ್ಯಾಜ್ಯಗಳು , ಮೊಟ್ಟೆ, ಕೊಳೆತ ಮಾಂಸಗಳು ರಾಶಿ ರಾಶಿಯಾಗಿ ಸಿಕ್ಕವು. ಇವೆಲ್ಲವನ್ನು ಜವನೆರ್‌ ಬೆದ್ರ ಸಂಘಟನೆಯ ಸರ್ವ ಸದಸ್ಯರು ಸಂಗ್ರಹಿಸಿ ಪರಿಸರ ಶುಚಿಯಾಗಿಸಿದರು. ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲೇ ಬೇಕಲ್ಲವೇ…?!

ನಿಮಗೆ ಈ ಸಂಘಟನೆಯ ಕಾರ್ಯ ಇಷ್ಟವಾದಲ್ಲಿ ಅವರಿಗೊಂದು ಅಭಿನಂದನೆ ಸಲ್ಲಿಸಿ…

ಅಮರ್‌ ಕೋಟೆ, ಸಂಸ್ಥಾಪಕರು 9741826999

LEAVE A REPLY

Please enter your comment!
Please enter your name here