ಪ್ರಮುಖ ಸುದ್ದಿರಾಜ್ಯವಾರ್ತೆ

ಈ ಅಭ್ಯರ್ಥಿಯ ನಡೆ ಇದೀಗ ನ್ಯಾಷನಲ್‌ ಇಷ್ಯೂ ಆಯ್ತಂತೆ!

 

ಮೂಡುಬಿದಿರೆ: ಹೌದು ಕಣ್ರೀ…ಈ ಪುರಸಭಾ ಅಭ್ಯರ್ಥಿ ನಡೆ ನ್ಯಾಷನಲ್‌ ಇಷ್ಯೂ ಆಯ್ತಂತೆ!. ಹ್ಹೂಂ.. ಏನೇ ಇದ್ರೂ ನಮ್ಗೆ ಮೋದೀಜೀ, ಅಮಿತ್‌ ಷಾ..ಸ್ಥಳೀಯವಾಗಿ ಕ್ಷೇತ್ರಾಧ್ಯಕ್ಷರಷ್ಟೇ ಸಾಕು ಎನ್ನುತ್ತಾರಂತೆ…ಇದೆಲ್ಲಾ ನಾವಲ್ಲ ಹೇಳಿರೋದು…ಸೋಶಿಯಲ್‌ ಮೀಡಿಯಾ ಮೂಲಕ ಈ ಅಭ್ಯರ್ಥಿ ತನ್ನ ʻಪೋಸ್ಟರ್‌ʼಒಂದನ್ನು ಹರಿ ಬಿಟ್ಟಿದ್ದು ದೊಡ್ಡ ಅವಾಂತರಕ್ಕೇ ಕಾರಣವಾಗಿದೆಯಂತೆ…ಈ ಇಷ್ಯೂ ಇದೀಗ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಮುಖರಷ್ಟೇ ಏಕೆ…? ಕೇಂದ್ರದ ಪ್ರಮುಖರ ತನಕವೂ ಮುಟ್ಟಿದೆಯಂತೆ!…ಇವೆಲ್ಲಾ ಅಂಶಗಳು ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ʻಹವಾʼ ಸೃಷ್ಠಿಮಾಡಿದ್ದಂತೂ ಸತ್ಯ!

ಇದ್ಯಾವುದೂ ನಮ್ಮ ಸೃಷ್ಠಿಯಲ್ಲ…ಐತಿಹಾಸಿಕ ನಗರಿ ಮೂಡುಬಿದಿರೆಯ ಪುರಸಭಾ ಸಮರ ಇದೀಗ ಕೇವಲ ಮೂಡುಬಿದಿರೆಗಷ್ಟೇ ಸೀಮಿತವಾಗದೆ ಅದು ʻಶಾಸಕʼ, ʻಸಂಸದʼರನ್ನೂ ದಾಟಿ ಮುಂದುವರಿದು ಹೋಗಿದೆಯಂತೆ. ಏನೇ ಹೇಳಿ ಮೂಡುಬಿದಿರೆ ಮಿನಿ ಭಾರತವೆಂದೇ ಖ್ಯಾತಿ ಪಡೆದಿದೆ. ಮೂಡುಬಿದಿರೆಯ ಸಾಧನೆಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ…ಮೂಡುಬಿದಿರೆಯನ್ನು ಇಡೀ ವಿಶ್ವ ಗಮನಿಸುವಂತೆ ಇಲ್ಲಿನ ಅನೇಕಾನೇಕ ಉತ್ತಮ ಕಾರ್ಯಗಳು ಮಾಡಿವೆ… ಇವೆಲ್ಲ ಇರಬೇಕಾದರೆ ಸಹಜವಾಗಿಯೇ ಇಂತಹ ಘನಕಾರ್ಯಗಳೂ ಮೂಡುಬಿದಿರೆಯನ್ನು ಮತ್ತೊಮ್ಮೆ ʻದೊಡ್ಡʼಮಟ್ಟದಲ್ಲಿ ಗಮನಿಸುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಹೌದು… ಮೂಡುಬಿದಿರೆ ಪುರಸಭೆಯ ಹದಿನಾಲ್ಕನೇ ವಾರ್ಡು ಈ ಬಾರಿ ತೀವ್ರ ಕುತೂಹಲಕ್ಕೆ ಕಾರಣವಾದ ಕ್ಷೇತ್ರ. ಇಡೀ ಪುರಸಭೆಯ ಚುನಾವಣೆಯಲ್ಲಿ ಈ ವಾರ್ಡ್‌ ಮಾತ್ರ ಇಷ್ಟೊಂದು ಹೆಸರು ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಲ್ವಿನ್‌ ಡಿʼಸೋಜ ಸ್ಪರ್ಧಿಸುತ್ತಿದ್ದಾರೆ. 13ನೇ ವಾರ್ಡ್‌ ಮೂಲಕ ಸ್ಪರ್ಧಿಸಿ ವಿಜೇತರಾಗಿದ್ದ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸಿ ಇದೀಗ ವಾರ್ಡ್‌ ಬದಲಾವಣೆ ಮಾಡಿರುವ ಪುರಸಭಾ ಸದಸ್ಯ ಪ್ರಸಾದ್‌ ಭಂಡಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ ನಿಂದ ಅಶೋಕ್‌ ಶೆಟ್ಟಿ, ಬಿ.ಎಸ್.ಪಿ ಯಿಂದ ಸುಲೋಚನಾ ಪಕ್ಷೇತರ ಅಭ್ಯರ್ಥಿ ಅಮರ್‌ ಕೋಟೆ ಕಣದಲ್ಲಿದ್ದಾರೆ. ಎಲ್ಲರೂ ಘಟಾನುಘಟಿಗಳೇ..ಜಿದ್ದಾ ಜಿದ್ದಿನ ಸ್ಪರ್ಧೆಯೇ…ಏತನ್ಮಧ್ಯೆ ಸಂಸದರು ಈ ವಾರ್ಡ್‌ ನಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿ ʻಬಿಜೆಪಿ ಅಭ್ಯರ್ಥಿಗೆ ಮತದಾರರು ಅವಕಾಶ ಮಾಡಿಕೊಡಿʼ ಎಂದು ವಿನಂತಿಸಿದ ಘಟನೆಯೂ ಆಗಿತ್ತು. ಇಷ್ಟೆಲ್ಲಾ ಆದಮೇಲೆ ಸಂಸದರಾಗಿ ಮರು ಆಯ್ಕೆ ಪಡೆದ ಸಂಸದರನ್ನು ಮರೆತರೆ ಹೇಗೆ ಎಂದು ಬಿಜೆಪಿ ಅಭ್ಯರ್ಥಿ ಒಂದು ಪೋಸ್ಟರ್‌ ಮಾಡಿ ಬಿಟ್ಟೇ ಬಿಟ್ಟರು ನೋಡಿ…ಇದೇ ಎಡವಟ್ಟಿಗೂ ಕಾರಣವಾಯಿತು. ಪಾಪ ಅವರು ಈ ಪೋಸ್ಟರ್‌ ಇಷ್ಟೆಲ್ಲಾ ಅವಾಂತರ ಸೃಷ್ಠಿಸಬಹುದೆಂದು ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ… ಮೂಡುಬಿದಿರೆಯಲ್ಲಿ ಮೊಟ್ಟಮೊದಲ ಬಾರಿಗೆ ಭರ್ಜರಿ ವಿಜಯಗಳಿಸಿದ ಭಾರತೀಯ ಜನತಾಪಕ್ಷ ಪ್ರತಿನಿಧಿಸಿದ್ದ ಉಮಾನಾಥ್‌ ಕೋಟ್ಯಾನ್‌ ಶಾಸಕರಾಗಿ ಉತ್ತಮ ಕಾರ್ಯಮಾಡುತ್ತಿದ್ದಾರೆ. ಪೋಸ್ಟರ್‌ ನಲ್ಲಿ ದುರ್ಬೀನು ಹಾಕಿ ಹುಡುಕಿದರೂ ಅವರ ಫೋಟೋ ಮಾತ್ರ ಕಾಣುತ್ತಲೇ ಇಲ್ಲ!. ಬಿಜೆಪಿಯ ಹಿರಿಯ ಮುಖಂಡರುಗಳಾದ ಮೋದೀಜಿ, ಅಮಿತ್‌ ಷಾ, ಬಿ.ಎಸ್.ಯಡಿಯೂರಪ್ಪ, ನಳೀನ್‌ ಕುಮಾರ್‌ ಕಟೀಲ್‌,ಈಶ್ವರ್‌ ಕಟೀಲ್‌ ಬಿಜೆಪಿಯ ಚಿಹ್ನೆ ಎಲ್ಲವೂ ಅಭ್ಯರ್ಥಿಯ ಫೋಟೋದೊಂದಿಗೆ ರಾರಾಜಿಸುತ್ತಿದೆ. ಚುನಾವಣೆಯ ಗಡಿಬಿಡಿಯಲ್ಲಿ ಹೀಗಾಗಿರಬಹುದೆಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಆಗಿರಲೂ ಬಹುದು…ಏನೇ ಆಗಲಿ ಶಾಸಕರು ಶಾಸಕರೇ…ಅವರನ್ನು ಅವರ ಗೆಲುವನ್ನು ಪಕ್ಷದ ʻಪ್ರಜ್ಞಾವಂತʼ ಕಾರ್ಯಕರ್ತರು ಮರೆಯುತ್ತಾರೆಯೇ?…

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here