ಇಸ್ಲಾಮಾಬಾದಿನಲ್ಲಿ ಕೇಂದ್ರ ಗೃಹ ಸಚಿವ

0
161

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಎರಡು ದಿನಗಳ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದಿಗೆ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೆರಳಿದ್ದಾರೆ.
 
 
 
ರಾಜನಾಥ್ ಆಗಮನವನ್ನು ಖಂಡಿಸಿ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ಹಾಗೂ ಉಗ್ರ ಸಂಘಟನೆ ಜತೆ ಗುರುತಿಸಿಕೊಂಡಿರುವ 2 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
 
 
ಹಿಜ್ಬುಲ್ ಸಂಘಟನೆ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಯುನೈಟೆಡ್ ಜಿಹಾದ್ ಕೌನ್ಸಿಲ್ ಹಾಗೂ ಇನ್ನೂ ಅನೇಕ ಗುಂಪುಗಳು ವಿಮಾನ ನಿಲ್ದಾಣದ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಇನ್ನೊಂದೆಡೆ ಇಸ್ಲಾಮಾಬಾದಿನ ನ್ಯಾಷನಲ್ ಪ್ರೆಸ್ ಕ್ಲಬ್ ಬಳಿ ಯಾಸಿನ್ ಮಲೀಕ್ ಪತ್ನಿ ಮಿಶಾಲ್ ಮಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
 
 
ಉಗ್ರರ ಬೆದರಿಕೆ, ವ್ಯಾಪಕ ಪ್ರತಿಭಟನೆ, ವಿರೋಧದ ನಡುವೆಯೂ ಎರಡು ದಿನಗಳ 2016ರ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಆಗಮಿಸಿದರು.

LEAVE A REPLY

Please enter your comment!
Please enter your name here