ಇಸ್ರೋದಿಂದ ಮೈಲಿಗಲ್ಲು ಸಾಧನೆ

0
255

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಇಸ್ರೋ ಸಂಸ್ಥೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಬುಧವಾರ ಬೆಳಗ್ಗೆ 9.26 ಕ್ಕೆ ಸರಿಯಾಗಿ ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ ಚಿ 34 ಮೂಲಕ 20 ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಯಾಗಿದೆ. ಇದು ಇಸ್ರೋದಿಂದ ಬಹುದೊಡ್ಡ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
 
 
ಒಂದೇ ಬಾರಿ ಒಂದೇ ರಾಕೆಟ್ ನಲ್ಲಿ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಈ ಮೂಲಕ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಿದೆ. ಇಸ್ರೋ ಸಂಸ್ಥೆ 2008ರಲ್ಲಿ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳ ಉಡಾವಣೆ ಮಾಡಿತ್ತು.
 
 
 
ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ)-ಸಿ34 ಉಡಾವಣಾ ವಾಹಕದಿಂದ ಉಪಗ್ರಹಗಳ ಉಡಾವಣೆ ನಡೆದಿದೆ. ಕಾರ್ಟೋಸ್ಯಾಟ್-2ಸಿ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಎರಡು ಉಪಗ್ರಹಗಳು, 17 ವಿದೇಶಿ (ಇಸ್ರೋ ಅಮೆರಿಕ, ಕೆನಡಾ, ಜರ್ಮನಿ, ಇಂಡೋನೇಷ್ಯಾದ ಮೈಕ್ರೋ ಉಪಗ್ರಹ)   ಮತ್ತು ವಾಣಿಜ್ಯ ಉಪಗ್ರಹಗಳ ಉಡಾವಣೆ ಮಾಡಿದೆ. ಇದರಲ್ಲಿ ಖ್ಯಾತ ಅಂತರ್ಜಾಲ ಶೋಧ ಸಂಸ್ಥೆ ಗೂಗಲ್ ನಿರ್ಮಿತ ಉಪಗ್ರಹ ಕೂಡ ಸೇರಿದಂತೆ ಇದರಲ್ಲಿ ಲಘು ಮತ್ತು ನ್ಯಾನೋ ಉಪಗ್ರಹಗಳೂ ಸೇರಿವೆ. ಉಪಗ್ರಹಗಳ ಒಟ್ಟು ತೂಕ 1,288 ಕೆಜಿ ಇದೆ.
 
 
 
ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾವಹಿಸಲಿರುವ ಈ ಉಪಗ್ರಹ ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ, ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ನೆರೆರಾಷ್ಟ್ರಗಳಿಂದ ಕ್ಷಿಪಣಿ ಉಡಾವಣೆ ಮಾಡಿದರೂ ಇದು ಮಾಹಿತಿ ನೀಡಲಿದೆ. ಇದನ್ನು ಅಹಮದಾಬಾದ್‌ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಎಸ್‌ಎಸಿ)ನಲ್ಲಿ ನಿರ್ಮಿಸಲಾಗಿದ್ದು, 690 ಕಿಲೋ ತೂಕವಿದೆ.
ಇದು ಹೈ ರೆಸಲೂಷನ್‌ನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 0.65 ರೆಸಲೂಷನ್‌ನ ಪ್ಯಾಂಕ್ರೋಮ್ಯಾಟಿಕ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ -ಟೋ ಮಾತ್ರವಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಂಪ್ರೆಸ್ ಮಾಡಿ, ಶೇಖರಿಸಲು ಹಾಗೂ ರವಾನಿಸುವುದಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ಉಪಗ್ರಹಗಳಿಗೆ ಸರಿಸಮವಾಗಿರುವ ಕಣ್ಗಾವಲು ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಭಾರತದ್ದಾಗಲಿದೆ.
 
20 ಉಪಗ್ರಹಗಳಲ್ಲಿ ಮೂರು ಸ್ವದೇಶಿ
ಸತ್ಯಭಾಮಾ ವಿವಿಯ 1 ಕೆಜಿ ಭಾರದ ಸತ್ಯಭಾಮಾಸ್ಯಾಟ್, ಪುಣೆ ಕಾಲೇಜಿನ 1 ಕೆಜಿಯ ಸ್ವಯಂ ಸ್ಯಾಟಲೆಟ್ ಮತ್ತು ಭಾರತದ ಭೂ ವೀಕ್ಷಣಾ ಕಾರ್ಟೋಸ್ಯಾಟ್-2 ಮತ್ತು 17 ವಿದೇಶಿ ಉಪಗ್ರಹಳನ್ನು ಯಶಸ್ವಿಯಾಗಿ ಉಡಾವಂಎ ಮಾಡಲಾಗಿದೆ.
 
ನಗರ ಪ್ರದೇಶ, ಗ್ರಾಮಾಂತರ ಪ್ರದೇಶ, ಕರಾವಳು ಪ್ರದೇಶ ಭೂ ಉಪಯೋಗದ ಮಾಹಿತಿ ನೀಡುವ ಕಾರ್ಟೋಸ್ಯಾಟ್, ಹಸಿರುಮನೆ ಆನಿಲಗಳ ಮಾಹಿತಿ ನೀಡುವ ಸತ್ಯಭಾಮಾಸ್ಯಾಟ್, ಹ್ಯಾಮ್ ರೇಡಿಯೋ ಕಮ್ಯೂನಿಟಿಯ ಸ್ವಯಂ ಸ್ಯಾಟಲೇಟ್ ಉಪಗ್ರಹಗಳನ್ನು ಅಂತರಿಕ್ಷ ತಲುಪಿಸಲು ಇಸ್ರೋ ಸಫಲವಾಗಿದೆ.

LEAVE A REPLY

Please enter your comment!
Please enter your name here