ಇವರ ನೋವಿಗೆ ಸ್ಪಂದಿಸೋಣ…

0
1362

33 ವರುಷದ ನಾಗರಾಜ್ ಶೆಟ್ಟಿ ಹಲವು ಕನಸು ಹೊತ್ತು ಯುವಕ. ಆದರೆ ವಿಧಿ ಲೀಲೆ ಬೇರೆಯಾಗಿತ್ತು. ಅವರ ಆ ದುರಾದೃಷ್ಟದ ಸಂದರ್ಭ ಕಂಬವೊಂದರಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದರು. ಅಂದಿನಿಂದ ಇಂದಿನ ತನಕ ಸುಮಾರು ೧೫ವರುಷಗಳಿಂದ ಪಡಬಾರದ ಕಷ್ಟು ಅನುಭವಿಸುತ್ತಿದ್ದಾರೆ. ಅವರ ನೋವುಗಳನ್ನು ಅವರ ಮಾತಲ್ಲೇ ಕೇಳಿ. ” ದ್ವಿತೀಯ ಪಿಯುಸಿ ಬಳಿಕ ನಾನು ನನ್ನ 18 ನೇ ವಯಸ್ಸಿನಲ್ಲಿ ವಿದ್ಯುತ್ ಗುತ್ತಿಗೆದಾರರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು ಕೆಲಸದ ಸಂದರ್ಭ ದಿನಾಂಕ 04/04/2005 ರಂದು ವಿದ್ಯುತ್ ಕಂಬದಿಂದ ಆಯಾ ತಪ್ಪಿ ಕೆಳಕ್ಕೆ ಬಿದ್ದು ಬೆನ್ನುಮೂಳೆ ಮತ್ತು ಮೆದುಳು ಬಳ್ಳಿ ಮುರಿತಕ್ಕೊಳಗಾದೆ.KMC ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಕಳೆದ 15 ವರುಷಗಳಿಂದ ಶೇಕಡಾ 100% ರಷ್ಟು ಶಾಶ್ವತ ಅಂಗವಿಕಲನಾಗಿರುತ್ತೇನೆ.

ಶೇಕಡಾ 100% ರಷ್ಟು ಶಾಶ್ವತ ಅಂಗವಿಕಲನಾದ 3 ತಿಂಗಳ ಬಳಿಕ ವಿವಿಧ ಅನಾರೋಗ್ಯ ಸಮಸ್ಯೆಗೆ ಒಳಗಾದೆ.ಇದರಿಂದಾಗಿ KMC ಮಣಿಪಾಲ ಆಸ್ಪತ್ರೆಯಲ್ಲಿ ನಿರಂತರವಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಯಿತು.ಇದುವರೆಗೆ ಒಟ್ಟು 17 ಬಾರಿ ಒಳರೋಗಿಯಾಗಿ ದಾಖಲಾಗಿದ್ದು 13 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. (ಬೆನ್ನುಮೂಳೆ,ಕೈ ಮೂಳೆ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ 2 ಬಾರಿ, ಮೂತ್ರ ಕೋಶದ Augmentation Cystoplasty ಶಸ್ತ್ರ ಚಿಕಿತ್ಸೆ 1 ಬಾರಿ ಮತ್ತು ಮೂತ್ರ ಕೋಶದ Cystoscopy ಶಸ್ತ್ರ ಚಿಕಿತ್ಸೆ 8 ಬಾರಿ.)

ಒಳರೋಗಿಯಾಗಿ ಪಡೆದ ಚಿಕಿತ್ಸೆಯ ಹೊರತು 2016 ರ ವರೆಗೆ ಪ್ರತೀ ತಿಂಗಳು OPD ಗೆ ತಪಾಸಣೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ.ಸದ್ಯ ಪ್ರತೀ 3 ತಿಂಗಳಿಗೊಮ್ಮೆ ತಪಾಸಣೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದೇನೆ.ಇದುವರೆಗೆ ಒಟ್ಟಾರೆ 12 ಲಕ್ಷಕ್ಕೂ ಅಧಿಕ ಖರ್ಚಾಗಿದ್ದು ಸದ್ಯ ಪ್ರತೀ ತಿಂಗಳು ಔಷಧಿಗೆ ರೂ.4000 ಖರ್ಚು ಬರುತ್ತಿದೆ.ಜೊತೆಗೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬೆನ್ನು ಮೂಳೆಗೆ ಹಾಕಿರುವ ರಾಡ್ ತೆಗೆಸಬೇಕಾಗಿದೆ.

ಮಾನ್ಯರೇ ನಾವು ಬಿಪಿಎಲ್ ಪಡಿತರ ವ್ಯಾಪ್ತಿಗೆ ಸೇರಿದವರಾಗಿದ್ದು ಮನೆಯಲ್ಲಿ ಆರ್ಥಿಕವಾಗಿ ದುಡಿಯುವವರು ಓರ್ವ ನನ್ನ ಅಣ್ಣ ಮಾತ್ರ.ಆತ ತನ್ನ ಪತ್ನಿ,ಮೂವರು ಮಕ್ಕಳು ಮತ್ತು ವಯಸ್ಕ ತಂದೆ-ತಾಯಿ ಜೊತೆಗೆ ನನ್ನನ್ನು ನೋಡಿಕೊಳ್ಳುವ ಅನಿವಾರ್ಯತೆ ಒಳಗಾಗಿದ್ದಾನೆ.ಆದರೆ ಆತನ ದುಡಿಮೆಯ ಆದಾಯದಲ್ಲಿ ತನ್ನ ಕುಟುಂಬ ನಿರ್ವಹಣೆ ಜೊತೆಗೆ ನನ್ನ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಆಸಾಧ್ಯವಾಗಿದೆ. ಆದ್ದರಿಂದ ದಯವಿಟ್ಟು ತಾವು ತಮ್ಮ ವತಿಯಿಂದ ನನ್ನ ತಿಂಗಳ ಔಷಧಿ ಖರ್ಚಿಗೆ ಆರ್ಥಿಕ ನೆರವು ನೀಡುವಂತೆ ನಿಮ್ಮಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೀದ್ದೇನೆ.
ಧನ್ಯವಾದಗಳು, ನಾಗರಾಜ್ ಶೆಟ್ಟಿ.
ಇವರು ಸ್ವಾಭಿಮಾನಿ. ಆದರೆ ಇಂದು ಅನಿವಾರ್ಯವಾಗಿ ಅವರು ನೆರವು ಯಾಚಿಸುವ ಸ್ಥಿತಿಯಲ್ಲಿದ್ದಾರೆ. ಸಮರ್ಥರಾದ ಪ್ರತಿಯೊಬ್ಬರೂ ಕೈಲಾದಷ್ಟು ಸಹಕಾರ ನೀಡಬೇಕು. ಅವರ ಬಾಳಲ್ಲಿ ಮತ್ತೊಮ್ಮೆ ಮಂದಹಾಸ ಮೂಡಿಸುವಂತೆ ಮಾಡಬೇಕಾಗಿದೆ. ಅವರ ಬ್ಯಾಂಕ್‌ ಖಾತೆಯ ವಿವರ ನೀಡಲಾಗಿದೆ. ನಿಮ್ಮ ಉದಾರತೆಯ ಸಹಕಾರ ಅಲ್ಲಿಗೆ ನಮೂದಾಗುವಂತಾಗಲಿ ಎಂಬುದು ನಮ್ಮ ಆಶಯ.
ವಿಳಾಸ : ನಾಗರಾಜ್ ಶೆಟ್ಟಿ,S/O ಕ್ರಷ್ಣಯ್ಯ ಶೆಟ್ಟಿ, ಅನಂತ ನಿಲಯ,ಗುಡ್ಡೆ ಅಂಗಡಿ
ಅಜೆಕಾರು ಪೋಸ್ಟ್,ಮರ್ಣೆ ಗ್ರಾಮ, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ. – 574101.
Mob – 7760940737.
ಬ್ಯಾಂಕ್‌ ವಿವರ: Nagaraj Shetty, A/c – 520101229478634

Advertisement

IFSC Code – CORP 0000098, Corporation Bank, Ajekar Branch.

LEAVE A REPLY

Please enter your comment!
Please enter your name here