ಇವರು ಬೆವರು ಸುರಿಸಿ ಅವರ ಜೀವ ಉಳಿಸುತ್ತಾರೆ!

0
1003

ವಾರ್ತೆ ವಿಶೇಷ

ಇನ್ನೊಬ್ಬರ ಕಣ್ಣೀರೊರೆಸಲು ಕೈಯಲ್ಲಿ ಹಣ ಬೇಕೆಂದೇನಿಲ್ಲ..ಮಾಡುವ ಮನಸ್ಸು ಇಚ್ಚಾಶಕ್ತಿಯಷ್ಟೇ ಸಾಕು. ಇದಕ್ಕೆ ನಿದರ್ಶನ ಈ ವೀರ. ಅಶಕ್ತರ ಬಡವರ ಪಾಲಿಗೆ ಸಹಾಯ ಹಸ್ತ ಚಾಚುವ ಈ ಕಲಾವಿದನನ್ನು ಎಷ್ಟು ಹೊಗಳಿದರೂ ಕಡಿಮೆಯೇ… ರವಿ ಕಟಪಾಡಿ ಎಂಬ ಈ ಯುವಕ ಹಲವರ ಪಾಲಿಗೆ ದೇವರು…

 

ವರ್ಷಂಪ್ರತಿ ಬೇರೆ ಬೇರೆ ಆಕರ್ಷಕ ವೇಷ ತೊಟ್ಟು ಧನ ಸಂಗ್ರಹ ಮಾಡಿ ಅಶಕ್ತರ ಕಣ್ಣೀರೊರೆಸುತ್ತಿದ್ದಾರೆ. ಇವರ ಈ ಸಾಧನೆಯನ್ನು ಪ್ರಶಂಸಿಸಲೇ ಬೇಕು. ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾವಸರದಲ್ಲಿ ರವಿ ವಿಭಿನ್ನ ವೇಷದಲ್ಲಿ ಕಳೆದ ಹತ್ತು ವರುಷಗಳಿಂದ ಕಾಣಿಸಿಕೊಳ್ಳುತ್ತಿದ್ದಾರೆ.

ತನ್ನ ಕಷ್ಟವನ್ನು ಮರೆತು ಇತರರ ಕಷ್ಟಕ್ಕೆ ನೆರವಾಗುವ ಇವರು ಈ ವರ್ಷವೂ ಹೊಸ ಆಕರ್ಷಕ ವೇಷ ತೊಟ್ಟು ಕಾಣಿಸಿಕೊಂಡಿದ್ದಾರೆ. ಅವರಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲೆಂಬ ಪ್ರಾರ್ಥನೆ.

Advertisement

LEAVE A REPLY

Please enter your comment!
Please enter your name here