ಇಲ್ಲೊಂದು ವಿಚಿತ್ರ ಆಚರಣೆ

0
296

ನಮ್ಮ ಪ್ರತಿನಿಧಿ ವರದಿ
ಮಳೆಗಾಗಿ ಬಳ್ಳಾರಿಯಲ್ಲಿ ವಿಶಿಷ್ಟ ಆಚರಣೆ ನಡೆದಿದೆ. ಅನಾದಿಕಾಲದಿಂದಲೂ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ವಿಚಿತ್ರ ಆಚರಣೆಯನ್ನು ಆಚರಿಸಲಾಗಿದೆ. ಜೀವಂತ ವ್ಯಕ್ತಿಗೆ ಅಂತ್ಯಕ್ರಿಯೆ ಮಾಡುವ ಪದ್ಧತಿ ಆಚರಿಸುತ್ತಿದ್ದಾರೆ.
 
 
 
ಮದುವೆಯಾದ ಜೀವಂತ ವೃದ್ಧನಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಜೀವಂತ ವ್ಯಕ್ತಿಗೆ ಪೂಜೆ ಮಾಡಿ,ಚಟ್ಟದಲ್ಲಿ ಕೂರಿಸಿ ಸ್ಮಶಾನಕ್ಕೆ ಮೆರವಣಿಗೆ ಮಾಡುತ್ತಾರೆ. ಸ್ಮಶಾನದವರೆಗೂ ಮೆರವಣಿಗೆ ಹೋಗಿ ವಾಪಸ್ ಬರುತ್ತಾರೆ.
 
 
 
ವೃದ್ಧ ಸೇರಿದಂತೆ ಎಲ್ಲರೂ ಗ್ರಾಮಕ್ಕೆ ವಾಪಸ್ ಆಗುತ್ತಾರೆ. ನಂತರ ಸ್ನಾನ ಮಾಡಿ ದೇವರ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

LEAVE A REPLY

Please enter your comment!
Please enter your name here