ಇಲಾಖೆ ಮೂಲಕ ಗೌರವಧನ ನೀಡಬೇಕು: ಪದ್ಮಪ್ರಸಾದ್‌ ಜೈನ್‌ ಒತ್ತಾಯ

0
1185


ಮೂಡುಬಿದಿರೆ: ಅಹರ್ನಿಶಿ ದುಡಿಯುವ ಅರೆಕಾಲಿಕ ಪತ್ರಕರ್ತರಿಗೆ ಸರಕಾರ ಇಲಾಖೆ ಮುಖಾಂತರ ಸೂಕ್ತ ಗೌರವಧನ ನೀಡಬೇಕು ಎಂದು ಮೂಡುಬಿದಿರೆಯ ವಕೀಲ, ಸಾಮಾಜಿಕ ಚಿಂತಕ ಪದ್ಮಪ್ರಸಾದ್‌ ಜೈನ್‌ ಒತ್ತಾಯಿಸಿದ್ದಾರೆ. ವಾರ್ತೆ. ಕಾಂ ನಲ್ಲಿ ಪ್ರಕಟಗೊಂಡ ವಾರ್ತೆ.ಕಾಂ ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಗೊಂಡ “ಅರೆಕಾಲಿಕ ಪತ್ರಕರ್ತರ ನೋವು ಅರ್ಥವೇ ಆಗೋದಿಲ್ವೇ?” ಲೇಖನ ಓದಿದ ಪದ್ಮಪ್ರಸಾದ್‌ ಜೈನ್‌ ತಕ್ಷಣ ಸರಕಾರ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.
ಪೇಟೆ ಪಟ್ಟಣ, ಹಳ್ಳಿಗಳಲ್ಲಿ ಜನ ಸಾಮಾನ್ಯರ ಕಷ್ಟ, ಕುಂದು ಕೊರತೆ ಗಳನ್ನು ಕಣ್ಣಾರೆ ಕಂಡು ಅದನ್ನು ಪ್ರಕಟಿಸಿ ಸರ್ಕಾರದ ಸಂಭಂದ ಪಟ್ಟವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ವರ್ಷವಿಡೀ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವವರು ಪತ್ರಕರ್ತರು ; ಎಂದ ಅವರು ಕರೋನ ಹಿನ್ನಲೆಯಲ್ಲಿ ಕೋವಿಡ್ ಲಾಕ್ಡೌನ್ ಕಾಲದಲ್ಲಿ ಮಾಧ್ಯಮ ಮಂದಿಯೂ ಬಹಳಷ್ಟು ತೊಂದರೆಗೆ ಒಳಗಾಗಿದ್ದಾರೆ. ಪತ್ರಕರ್ತರಿಂದ ಪ್ರಚಾರದಿಂದ ಲಾಭ ಪಡೆದು ಮೇಲೆ ಬಂದ ರಾಜಕೀಯ, ಶೈಕ್ಷಣಿಕ ರಂಗದ ಗಣ್ಯರು ಸ್ಪಂದಿಸಬೇಕು.
ಸ್ವತಃ ಅರೆಕಾಲಿಕ ಪತ್ರಕರ್ತರಾಗಿ ಈಗ ಸಂಸದರು, ಶಾಸಕರು ಆಗಿ ಆಯ್ಕೆಯಾದ ನಾಯಕರು ಈ ಕೂಡಲೇ ಸರ್ಕಾರದ ಗಮನಕ್ಕೆ ಈ ವಿಷಯ ವನ್ನು ತರಬೇಕು ಎಂದವರು ಒತ್ತಾಯಿಸಿದ್ದಲ್ಲದೆ ಅರೆಕಾಲಿಕ ಪತ್ರಕರ್ತರಿಗೆ ಸೂಕ್ತ ಗೌರವ ಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here