ಇನ್ಸುಲಿನ್ ಮತ್ತು ಮಧುಮೇಹ

0
401

ಅಂಕಣ: ಡಾ.ಸತೀಶ ಶಂಕರ್ ಬಿ.
ಇನ್ಸುಲಿನ್:
ಇದೊಂದು ಲ್ಯಾಟಿನ್ ಪದ. ಇನ್ಸುಲಿನ್ ಎಂದರೆ ಐಲ್ಯಾಂಡ್. ಇನ್ಸುಲಿನ್ ಎಂಬುದು ಹಾರ್ಮೋನ್. ಇದು ಪ್ಯಾನ್ ಕ್ರಿಯಾಸ್ ಗ್ರಂಥಿಯ ಸೆಲ್ ನಲ್ಲಿ ಉತ್ಪಾದನೆಯಾಗುತ್ತದೆ.
ಶರೀರದ ಗ್ಲುಕೋಸ್ ಅನ್ನು ಇದು ನಿಯಂತ್ರಣದಲ್ಲಿಡುತ್ತದೆ. ಶರೀರದ ಎಲ್ಲಾ ಜೀವಕೋಶಗಳಿಗೂ, ಶಕ್ತಿಗಾಗಿ ಗ್ಲುಕೋಸ್ ಅವಶ್ಯಕತೆಯಿದೆ. ರಕ್ತದಲ್ಲಿರುವ ಗ್ಲುಕೋಸ್ ಅಂಶ ಜೀವಕೋಶಕ್ಕೆ ಸಿಗುವಲ್ಲಿ ಇನ್ಸುಲಿನ್ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸುಲಿನ್ ಕೊರತೆ ಇದ್ದಾಗ ರಕ್ತದಲ್ಲಿ ಗ್ಲುಕೋಸ್ ಅಂಶ ಇದ್ದರೂ ಅದು ಜೀವಕೋಶಕ್ಕೆ ಸೂಕ್ತ ಪ್ರಮಾಣ ದೊರಕದು.
ನಾವು ಆಹಾರ ತೆಗೆದುಕೊಂಡಾಗ ಶರೀರದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗುತ್ತದೆ. ಆಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಮತ್ತು ಇನ್ಸುಲಿನ್ ಗ್ಲುಕೋಸ್ ಅನ್ನು ಲಿವರ್ ನಲ್ಲಿ, ಮಾಂಸಖಂಡಗಳಲ್ಲಿ ಗೈಕೋಜನ ಆಗಿ ಶೇಖರಿಸಲು ಸಹಕರಿಸುತ್ತದೆ. ಮತ್ತು ರಕ್ತದಲ್ಲಿರುವ ಗ್ಲುಕೋಸ್ ಅನ್ನು ಜೀವಕೋಶಗಳಿಗೆ ಸಿಗುವಂತೆ ಮಾಡುತ್ತದೆ.
ಜೀವಕೋಶಗಳಿಗೆ ಶಕ್ತಿಗಾಗಿ ಗ್ಲುಕೋಸ್ ಅತ್ಯವಶ್ಯ. ಇನ್ಸುಲಿನ್ ನಮ್ಮ ರಕ್ತದಲ್ಲರುವ ಗ್ಲುಕೋಸ್ ಅಂಶಕ್ಕೆ ಅನುಗುಣವಾಗಿ ಪ್ಯಾನ್ ಕ್ರಿಯಾಸ್ ಗ್ರಂಥಿಯಲ್ಲಿ ಉತ್ಪಾದನೆ ಆಗುತ್ತದೆ.
ಮಧುಮೇಹ:
ಮಧುಮೇಹ ಬರಲು 2 ಮುಖ್ಯ ಕಾರಣಗಳು:
1. ಪ್ಯಾನ್ ಕ್ರಿಯಾಸ್ ನಲ್ಲಿ ಸೂಕ್ತ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಇಲ್ಲದಿರುವುದು ಅಥವಾ ಅನುತ್ಪಾದನೆ.
2. ಇನ್ಸುಲಿನ್ ಗೆ ಶರೀರ ಸೂಕ್ತವಾಗಿ ಸ್ಪಂದಿಸದೇ ಇರುವುದು.
ಮಧುಮೇಹದ ಆರಂಭಿಕ ಹಂತದಲ್ಲಿ ಅತಿಯಾದ ಹಸಿವು ಕಂಡುಬರುತ್ತದೆ. ಯಾಕೆಂದರೆ ಇನ್ಸುಲಿನ್ ಕೊರತೆಯಿಂದಾಗಿ ರಕ್ತದಲ್ಲಿ ಗ್ಲುಕೋಸ್ ಅಂಶ ಇದ್ದರೂ ಅದು ಜೀವಕೋಶಗಳಿಗೆ ಅಲಭ್ಯ. ಹೀಗಾಗಿ ಶಕ್ತಿಗಾಗಿ ಜೀವಕೋಶಗಳು ಸಂದೇಶ ರವಾನಿಸುತ್ತದೆ. ಹೀಗಾಗಿ ಅತಿಯಾದ ಹಸಿವು ಕಾಣಿಸಿಕೊಳ್ಳುತ್ತದೆ.
ಪದೇ ಪದೇ ಮೂತ್ರ ವಿಸರ್ಜನೆ:
ಮಧುಮೇಹಿಗಳಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕಿಡ್ನಿಯು ರಕ್ತದಲ್ಲಿರುವ ಅತಿಯಾದ ಗ್ಲುಕೋಸ್ ಅಂಶವನ್ನು ಪದೆ ಪದೇ ಹೊರಹಾಕುತ್ತದೆ. ಹೀಗಾಗಿ ಅತಿಯಾದ ಬಾಯಾರಿಕೆ ಬರುತ್ತದೆ. ನೀರಿನ ಅಂಶ ಹೆಚ್ಚಾದಾಗ ಮತ್ತೆ ಮೂತ್ರ ವಿಸರ್ಜನೆಗೆ ಪ್ರೇರೇಪಿಸುತ್ತದೆ.
ಜೀವಕೋಶಗಳಿಗೆ ಶಕ್ತಿಯ ಕೊರತೆಯಿಂದಾಗಿ ಮಧುಮೇಹಿಗಳು ಶಕ್ತಿಹೀನತೆಯಿಂದ ಬಳಲುತ್ತಾರೆ.
ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here