ಇನ್ಸಾಟ್ 3ಡಿಆರ್ ಉಡಾವಣೆಗೆ ರೆಡಿ

0
364

 
ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಮತ್ತು ಮುಂದುವರೆದ ಹವಾಮಾನ ಉಪಗ್ರಹ ಇನ್ಸಾಟ್ 3ಡಿಆರ್ ಉಡಾವಣೆಗೆ ಸಜ್ಜಾಗಿದೆ. ಇದೇ ಗುರುವಾರ ಇನ್ಸಾಟ್ 3ಡಿಆರ್ ಉಡಾವಣೆಗೆ ಸಮಯ ಕೂಡ ನಿಗದಿಪಡಿಸಲಾಗಿದೆ.
 
 
ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ ಮಾಡಲಾಗಿತ್ತು. ಇದಾದ ಬಳಿಕ 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರೆದ ಭಾಗವಾಗಿ ನಾಳೆ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲು ಇಸ್ರೋ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.
 
 
ಜಿಎಸ್ಎಲ್ ವಿ ಎಫ್ 05 ಉಡಾವಣಾ ವಾಹಕ 2, 211 ಕೆಜೆ ತೂಕವಿರುವ ಈ ಉಪಗ್ರಹ ಸೇರಿದಂತೆ ಈ ಅಲ್ಜೇರಿಯಾ ಉಪಗ್ರಹವನ್ನು ಹೊತ್ತು ಕಕ್ಷೆಗೆ ಸಾಗಲಿದೆ. ಸ್ಕಾಟ್‍ಸ್ಯಾಟ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದೆ. ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳನ್ನು ವೀಕ್ಷಿಸುವ ಮೂಲಕ ಚಂಡಮಾರುತವನ್ನು ಮೊದಲೇ ಗ್ರಹಿಸಿ ಎಚ್ಚರಿಕೆ ನೀಡುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಸ್ಕಾಟ್‍ಸ್ಯಾಟ್ ಉಪಗ್ರಹವನ್ನು ಅಲ್ಜೇರಿಯಾದ ಉಪಗ್ರಹದ ಜತೆ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ.

LEAVE A REPLY

Please enter your comment!
Please enter your name here