ಇನ್ಮುಂದೆ ಸ್ಕರ್ಟ್ ಬದಲು ಚೂಡಿದಾರ್

0
149

ಬೆಂಗಳೂರು ಪ್ರತಿನಿಧಿ ವರದಿ
 
ಇನ್ನು ಮುಂದೆ ಹೈಸ್ಕೂಲಿನ ಹೆಣ್ಣು ಮಕ್ಕಳು ಸಮವಸ್ತ್ರ ಬದಲಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇವರು ಚೂಡಿದಾರ್‌ನ್ನು ಸಮವಸವಾಗಿ ಪಡೆಯಲಿದ್ದಾರೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ನಡೆಸಿದ ಪ್ರಾಥಮಿಕ-ಪ್ರೌಢಶಾಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬದಲಾವಣೆಗೆ ಸಮ್ಮತಿಸಿದ್ದಾರೆ ಎಂದು  ವಿಧಾನಸೌಧದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
 
8, 9, 10ನೇ ತರಗತಿ ಹುಡುಗಿಯರಿಗೆ ಚೂಡಿದಾರ್ ವಿತರಣೆ ಮಾಡಲಾಗುತ್ತದೆ. ಮುಂದಿ ಶೈಕ್ಷಣಿಕ ವರ್ಷದಿಂದಲೇ ಹೊಸ ನಿಯಮ ಜಾರಿಯಾಗಲಿದೆ.
ಸರ್ಕಾರಿ ಶಾಲೆಯ ಹುಡುಗಿಯರಿಗೆ ಸ್ಕರ್ಟ್ ಬದಲು ಚೂಡಿದಾರ್ ವಿತರಣೆ ನಿರ್ಧರಿಸಲಾಗಿದೆ ಎಂದಿದ್ದಾರೆ.
 
 
ಬಿಸಿ ಊಟದ ಗುಣಮಟ್ಟ ಹೆಚ್ಚಳಕ್ಕೆ ಕ್ಲಸ್ಟರ್ ಮಟ್ಟದ ಪ್ರಯೋಗಾಲಯ ತೆರೆಯಲು ತೀರ್ಮಾನಿಸಲಾಗಿದೆ ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಸದ್ಯ ರಾಮನಗರ, ಮಂಡ್ಯ, ಮೈಸೂರಲ್ಲಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಆ ಪ್ರಯೋಗಾಲಯದಲ್ಲಿ ಬಿಸಿ ಊಟದ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ.
 
 
ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಬಗ್ಗೆ ಚರ್ಚೆ ನಡೆದಿದೆ. ಗೊಂದಲಗಳನ್ನು ನಿವಾರಿಸಲು ಸಿಎಂ ಸೂಚನೆ ನೀಡಿದ್ದಾರೆ. ಪಠ್ಯ, ಸಮವಸ್ತ್ರ, ಸೈಕಲ್, ಶೂ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. ಇದು ಹೀಗೆ ಮುಂದುವರಿಯಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ. ನವೆಂಬರ್ ನೊಳಗೆ ಪಠ್ಯ, ಸೈಕಲ್ ಟೆಂಡರ್ ಮುಗಿಯುತ್ತದೆ. 1 ವರ್ಷ ಗ್ಯಾರಂಟಿ ನೀಡುವವರಿಗೆ ಶೂ ಟೆಂಡರ್ ನೀಡುತ್ತೇವೆ. ಸದಯ ಶಿಕ್ಷಣ ಇಲಾಖೆಯಲ್ಲಿ 14589 ಶಿಕ್ಷಕರ ಕೊರತೆ ಇದೆ. ಈ ವರ್ಷ 10 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಮ್ಮತಿ ನೀಡಿದ್ದಾರೆ. ಈಗಾಗಲೇ ನೇಮಕಾತಿಗೆ ಸಿಎಂ ಅನುಮೋದನೆ ನೀಡಿದ್ದಾರೆ. ಇನ್ನುಳಿದ 4 ಸಾವಿರ ಹುದ್ದೆಗಳಿಗೆ ಮುಂದಿನ ವರ್ಷ ನೇಮಕ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here