ಇನ್ನೂ ಹಳೇನೋಟು ನಿಮ್ಮ ಬಳಿ ಇದ್ದರೆ ದಂಡ ಗ್ಯಾರೆಂಟಿ!

0
528

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೆಯ ನೋಟು ಬಳಕೆ ವಿರುದ್ಧ ಸುಗ್ರೀವಾಜ್ಞೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಹಳೇ ನೋಟುಗಳ ಬಂದ್ ಸಂಬಂಧ ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಹಳೆ ನೋಟುಗಳ ಬಳಕೆ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಂಪುಟ ಸಭೆ ಸಮ್ಮತಿ ನೀಡಿದೆ.
 
 
500, 1000 ರೂ. ಹಳೇ ನೋಟು ಬಳಕೆ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಗರಿಷ್ಠ 10 ಸಾವಿರ ರೂ. ನೋಟು ಮಾತ್ರ ಇಟ್ಟುಕೊಳ್ಳಬಹುದು. 10 ಸಾವಿರಕ್ಕಿಂತ ಹೆಚ್ಚು ಹಳೆ ನೋಟು ಇದ್ದರೆ 10 ಪಟ್ಟು ದಂಡ ಕಟ್ಟಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
 
 
 
ಮಾರ್ಚ್ 31ರ ನಂತರ ಹಳೇ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಹಳೇನೋಟು 10 ಸಾವಿರಕ್ಕಿಂತ ಹೆಚ್ಚು ನೋಟು ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ನೋಟುಗಳು ಇದ್ದರೆ ಅಂತವರು ದಂಡ ಕಟ್ಟಬೇಕಾಗುತ್ತದೆ. 500ರೂ. ಮತ್ತು 1000ರೂ. ಮುಖಬೆಲೆಯ ಹಳೇ ನೋಟು ನಿಷೇಧ ಸಂಬಂಧ ಸುಗ್ರೀವಾಜ್ಞೆ ಹೊರಡಸಿಲು ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here