ಇನ್ನೂ ಸೇಲ್ ಆಗದ ಕಿಂಗ್ ಫಿಷರ್ ಹೌಸ್

0
321

ರಾಷ್ಟ್ರೀಯ ಪ್ರತಿನಿಧಿ ವರದಿ
ಉದ್ಯಮಿ, ಮದ್ಯದ ದೊರೆಯ ಕಿಂಗ್ ಫಿಷರ್ ಹೌಸ್ ಕೊಳ್ಳುವವರಿಲ್ಲ. 3ನೇ ಬಾರಿಗೆ ಮುಂಬೈನ ಫ್ಲಶ್ ವಿಲ್ಲೆ ಪಾರ್ಲೆ ಏರಿಯಾದಲ್ಲಿರೋ ವಿಜಯ್ ಮಲ್ಯ ಕಿಂಗ್ ಫಿಷರ್ ಹೌಸ್ ಹರಾಜು ಆಗಿದೆ. ಮೂರನೇ ಭಾರಿಯೂ ಕಿಂಗ್ ಫಿಷರ್ ಹೌಸ್ ಹರಾಜು ವ್ಯರ್ಥವಾಗಿದೆ.
 
 
 
ಮನೆಗೆ ಕಡಿಮೆ ಬೆಲೆಯದರೂ ಇನ್ನೂ ಮನೆ ಸೇಲ್ ಆಗಲಿಲ್ಲ. ದರ 15% ಇಳಿಸಿದರೂ ಮನೆ ಕೊಳ್ಳಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಮದ್ಯದ ದೊರೆ ಮಲ್ಯ ಎಸ್ ಬಿಐ ನಿಂದ ಸಾಲ ಪಡೆದುಕೊಂಡಿದ್ದರು. ಸಾಲ ವಸೂಲಿಗಾಗಿ ಎಸ್ ಬಿಐ ಬ್ಯಾಕ್ ಮನೆಯನ್ನು ಹರಾಜಿ ಇಟ್ಟಿದೆ.
 
 
2ನೇ ಬಾರಿ ಹರಾಜಿನಲ್ಲಿ 130 ಕೋಟಿ ರೂ.ಗೆ ಬೆಲೆ ಇಳಿಕೆಯಾಗಿತ್ತು. ಈಗ ಮೂರನೇ ಬಾರಿ ಬೆಲೆ ಇಳಿಸಿದರೂ ಮಲ್ಯ ನಿವಾಸ ಸೇಲ್ ಆಗಲೇ ಇಲ್ಲ.
ಕಿಂಗ್ ಫಿಷರ್ ಹೌಸ್ 17,000ಸ್ಕೇರ್ ಫಿಟ್ ವಿಸ್ರೀರ್ಣದಲ್ಲಿದೆ. ಮಾರ್ಚ್ ನಲ್ಲಿ ಕಿಂಗ್ ಫಿಷರ್ ಹೌಸ್ ನ ಮೊದಲ ಹರಾಜು ನಡೆದಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಮೊದಲ ಹರಾಜಿನಲ್ಲಿ 150 ಕೋಟಿಗೆ ದರ ನಿಗದಿ ಮಾಡಲಾಗಿತ್ತು. ಯಾರೂ ಖರೀದಿಗೆ ಮುಂದೆ ಬಾರದ ಕಾರಣ 2ನೇ ಹರಾಜಿನಲ್ಲಿ ದರ ಇಳಿಕೆ ಮಾಡಲಾಗಿತ್ತು. 10% ದರ ಇಳಿಸಿ 130 ಕೋಟಿ ನಿಗದಿ ಮಾಡಲಾಗಿತ್ತು. ನಂತರ 2ನೇ ಹರಾಜಿಗೂ ಯಾರೂ ಬಾರದ ಕಾರಣ ಮತ್ತೆ 15% ದರ ಇಳಿಕೆ ಮಾಡಲಾಗಿತ್ತು. 3ನೇ ಹರಾಜಿನಲ್ಲಿ 115 ಕೋಟಿ ದರ ನಿಗದಿ ಮಾಡಲಾಗಿತ್ತು. ಈಗ 3ನೇ ಹರಾಜಿನಲ್ಲೂ ಎಸ್ ಬಿಐಗೆ ನಿರಾಸೆಯಾಗಿದೆ.

LEAVE A REPLY

Please enter your comment!
Please enter your name here