ಇನ್ನೂ ತಗ್ಗದ ಪ್ರವಾಹ

0
285

ರಾಷ್ಟ್ರೀಯ ಪ್ರತಿನಿಧಿ ವರದಿ
ತೆಲಂಗಾಣದಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೆಲಂಗಾಣದ ಹಲವೆಡೆ ಪ್ರವಾಹ ಸ್ಥಿತಿ ಮುಂದುವರಿದಿದೆ. ಹೈದರಾಬಾದ್ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ.
 
ಭಾರತೀಯ ಸೇನೆಯ 4 ತಂಡಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಪುನರ್ ವಸತಿ ಕೇಂದ್ರ, ಮೆಡಿಕಲ್ ಕ್ಯಾಂಪ್ ಗಳ ಸ್ಥಾಪನೆ ಮಾಡಲಾಗಿದೆ. ಜಿಹೆಚ್ ಎಮ್ ಸಿ ಜತೆ ಎನ್ ಡಿಆರ್ ಎಫ್ ನ 4 ತುಕಡಿಗಳು ಕಾರ್ಯ ನಿರ್ವಹಿಸುತ್ತಿದೆ.
 
 
ಮಂಜಿರಾ ನದಿಯ ಪ್ರವಾಹದಲ್ಲಿ 23 ಜನರು ಸಿಲುಕಿಕೊಂಡಿದ್ದಾರೆ. ಇದರಿಂದ ಮೇದಕ್ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಎರಡು ಹೆಲಿಕಾಷ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

LEAVE A REPLY

Please enter your comment!
Please enter your name here