ಇದೊಂದು ಅಚ್ಚರಿ…`ಸಹಸ್ರಲಿಂಗ'

0
1056

 
ಇದೊಂದು ಅಚ್ಚರಿ. ಸಹಸ್ರ ಲಿಂಗವೆಂಬ ಅದ್ಭುತ… ಇದಿರುವುದು ಶಿರಸಿಯ ಸಮೀಪ…
ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು ೧೨ ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ ೦.೫ ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಯೆಮ್ದು ಹೇಳುತ್ತಾರೆ. ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.
 
sahastralinga spcl2
ಕಣ್ಮರೆ
ಇದೀಗ ಸಹಸ್ರಲಿಂಗಗಳು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಮಳೆಗಾಲದಲ್ಲಿ ರಭಸಕ್ಕೆ ಬರುವ ನೀರಿನೊಂದಿಗೆ ಈ ಲಿಂಗಗಳಿರುವ ಕಲ್ಲುಗಳೂ ಕೊಚ್ಚಿ ಹೋಗುತ್ತಿರುವುದು ವಿಪರ್ಯಾಸ. ಇದು ಹೀಗೇ ಮುಂದುವರಿದರೆ ಈ ಅದ್ಭುತ ಇತಿಹಾಸಕ್ಕೆ ಸೇರುವುದರಲ್ಲಿ ಸಂದೇಹವೇ ಇಲ್ಲ.
 
sahastralinga spcl1
ಪ್ರವಾಸೋದ್ಯಮಕ್ಕೆ ಆದ್ಯತೆ
ಸಹಸ್ರಲಿಂಗ ವೀಕ್ಷಣೆಗೆ ಅನುಕೂಲವಾಗುವ ರೀತಿಯಲ್ಲಿ ಈ ಭಾಗದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕೆ ಬೇಕಾಗುವ ವ್ಯವಸ್ಥೆಗಳನ್ನು ಮಾಡಲಾಗಿದೆ.
 
sahastralinga spcl5
 
ಲಿಂಗಗಳ ರಕ್ಷಣೆಯಾಗಲಿ
ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ವಿನಾಶದಂಚಿಗೆ ಸಿಲುಕುವ ಸಹಸ್ರಲಿಂಗ ರಕ್ಷಿಸಬೇಕೆಂಬುದು ಸ್ಥಳೀಯರ ಆಗ್ರಹ. ನೀರ ರಭಸಕ್ಕೆ ಕೊಚ್ಚಿಹೋಗುವ ಲಿಂಗಗಳ ತಳಭಾಗಕ್ಕೆ ಕಾಂಕ್ರೀಟ್ ಬಳಸಿ ಭದ್ರಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಆದರೆ ಕಾಂಕ್ರೀಟ್ ಬಳಸಿ ಭದ್ರಗೊಳಿಸಿದರೆ ಅದರ ನೈಜತೆ ಹೋಗುವುದರಲ್ಲಿ ಯಾವೊಂದು ಸಂದೇಹವೂ ಇಲ್ಲ.

LEAVE A REPLY

Please enter your comment!
Please enter your name here