ಇದು ಹಿಂದು ವಿರೋಧ ನೀತಿ: ಮುತಾಲಿಕ್

0
436

ಬೆಳಗಾವಿ ಪ್ರತಿನಿಧಿ ವರದಿ
ಸುಹಾನಾ ಹಿಂದು ದೇವರ ಬಗ್ಗೆ ಹಾಡು ಹಾಡಿದ್ದ ಪ್ರಕರಣದ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುಹಾನಾ ಹಿಂದು ದೇವರ ಭಕ್ತಿಗೀತೆಗಳನ್ನು ಹಾಡುವುದು ಸ್ವಾಗತಾರ್ಹವಾಗಿದೆ. ಆದರೆ ಸುಹಾನಾಗೆ ಮುಸ್ಲಿಂ ಸಮಾಜದಿಂದ ವಿರೋಧ ಸರಿಯಲ್ಲ. ಈ ವರ್ತನೆ ಮುಸ್ಲಿಂ ಸಮಾಜದ ಮಾನಸಿಕ ಸ್ಥಿತಿ ತೋರಿಸುತ್ತದೆ. ಇದು ಹಿಂದು ವಿರೋಧಿ ನೀತಿಯಾಗಿದೆ ಎಂದು ಮುತಾಲಿಕ್ ಉತ್ತರಿಸಿದ್ದಾರೆ.
 
 
ಬುದ್ಧಿ ಜೀವಿಗಳು ಅಭಿವ್ಯಕ್ತ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ. ಈಗ ಯಾಕೆ ಆ ಬುದ್ಧಿ ಜೀವಿಗಳು ಮಾಡನಾಡುತ್ತಿಲ್ಲ? ಮುಸ್ಲಿಂ ಎಂದಾಕ್ಷಣ ಬುದ್ಧಿ ಜೀವಿಗಳ ಬಾಯಿ ಬಂದ್ ಆಗುತ್ತದೆ. ಆದ್ದರಿಂದ ನಾನು ಹಿಂದು ವಿರೋಧಿ ನೀತಿಯನ್ನು ಖಂಡಿಸುತ್ತೇನೆ ಎಂದು ಗರಂ ಆಗಿ ಮುತಾಲಿಕ್ ಪ್ರತಿಕ್ರಿಯೆಸಿದ್ದಾರೆ.
 
 
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ’ ಕಾರ್ಯಕ್ರಮದ 13ನೆಯ ಸೀಸನ್‌ನ ಮೆಗಾ ಆಡಿಷನ್‌ನಲ್ಲಿ ಸುಹಾನಾ ಸಯ್ಯದ್‌ ಎಂಬ ಶಿವಮೊಗ್ಗ ಜಿಲ್ಲೆ ಸಾಗರದ ಹುಡುಗಿಯಾಗಿದ್ದು, ಈಕೆಹಿಂದೂ ದೇವರುಗಳ ಸ್ತೋತ್ರ ಭಜನೆ ಸೇರಿದಂತೆ ಜಾನಪದ ಹಾಡುಗಳನ್ನು ಹಾಡಿದ್ದರು.

LEAVE A REPLY

Please enter your comment!
Please enter your name here