ಪ್ರಮುಖ ಸುದ್ದಿರಾಜ್ಯವಾರ್ತೆ

ಇದು ದೇವ ಮಹಿಮೆಯೇ ಸರಿ..!

ಬೆಳ್ಳಂಬೆಳಗ್ಗೆ ನಡೆಯಿತು ಬೃಹತ್‌ ಪಾದಯಾತ್ರೆ…!
ಮೂಡುಬಿದಿರೆ:  ಮಹತೋಭಾರ  ಶ್ರೀ ಸೋಮನಾಥೇಶ್ವರ  ದೇವಸ್ಥಾನ ಶ್ರೀ  ಕ್ಷೇತ್ರ ಪುತ್ತಿಗೆ ಇದರ  ಜೀರ್ಣೋದ್ದಾರದ ಪ್ರಯುಕ್ತ ಬೆಳುವಾಯಿಯಿಂದ  ಭಾನುವಾರ ಬೆಳಗ್ಗೆ ಪಾದಯಾತ್ರೆ ನಡೆಯಿತು .ಊಹೆಗೂ ಮೀರಿ ಭಕ್ತ ಸಮೂಹ ಸಮರೋಪಾದಿಯಲ್ಲಿ ಭಾಗವಹಿಸಿದರು.
ಶ್ರೀ ಕ್ಷೇತ್ರ ಪುತ್ತಿಗೆ ಜೀರ್ಣೋದ್ದಾರದ ಬೆಳುವಾಯಿ ಗ್ರಾಮ ಸಮಿತಿಯ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಸುಮಾರು 700 ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ  5. 30 ಗಂಟೆಗೆ ಬಂಗ್ಲೆ ಮಹಮ್ಮಾಯಿ ಕ್ಷೇತ್ರದಿಂದ ಹೊರಟು 5.45ಕ್ಕೆ ಬೆಳುವಾಯಿ ಮಹಮ್ಮಾಯಿ ಕ್ಷೇತ್ರ ತಲುಪಿ ಕೆಸರ್ ಗದ್ದೆಯ ರಾಮ ಮಂದಿರದ ಮೂಲಕವಾಗಿ  ನಂತರ ಅಂಬೂರಿ ಮಹಮ್ಮಾಯಿ ಕ್ಷೇತ್ರ, ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನವಾಗಿ ನಂತರ ಶ್ರೀ ಕ್ಷೇತ್ರ ಪುತ್ತಿಗೆಗೆ ತಲುಪಿತು.
ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಾನದಲ್ಲಿ ಜೀರ್ಣೋದ್ದಾರದ ಬಗ್ಗೆ ವಿಶೇಷ ಪ್ರಾರ್ಥನೆ ಪೂಜೆ ಮಾಡಲಾಯಿತು. ನಂತರ ನಡೆದ ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಮೂಡುಬಿದ್ರೆ ಚೌಟರ ಅರಮನೆ ಯ ಕುಲದೀಪ್ ಎಂ. ಮಾತನಾಡಿ ಬೆಳುವಾಯಿ ಸಮಿತಿಯವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ನಡೆದ ಪಾದಯಾತ್ತೆಯು ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನಡೆದಿದೆ ಮತ್ತು ಉಳಿದ ಗ್ರಾಮ ಸಮಿತಿಯವರಿಗೆ ಪ್ರೇರಣೆಯಾಗಿದೆ ಎಂದರು.
  ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋಧ್ಧಾರ ಗ್ರಾಮ ಸಮಿತಿ ಬೆಳುವಾಯಿಯ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು .

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here